ಎಂಐಜಿ ಮನೆಗಳ ವಿಸ್ತೀರ್ಣ ಹೆಚ್ಚಳ ಅನುಮೋದನೆಗೆ ವ್ಯಾಪಕ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

Mangala--01

ನವದೆಹಲಿ, ನ.17-ಪ್ರಧಾನಮಂತ್ರಿ ಅವಾಸ್ ಯೋಜನೆ-ನಗರ(ಪಿಎಂಎವೈ-ಯು) ಅಡಿ ಮಧ್ಯಮ ಆದಾಯ ಗುಂಪು(ಎಂಐಜಿ) ವರ್ಗದ ಮನೆಗಳ ಕಾರ್ಪೆಟ್ ಏರಿಯಾ (ಬಳಸಬಹುದಾದ ಪ್ರದೇಶ) ವಿಸ್ತೀರ್ಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳು ಸ್ವಾಗತಿಸಿವೆ.

ಎಂಐಜಿ-1ನೇ ವರ್ಗದ ಅಡಿ ಮನೆಗಳ ಕಾರ್ಪೆಟ್ ಏರಿಯಾವನ್ನು ಪಸ್ತುತ 90 ಚದರ ಮೀಟರ್‍ಗಳಿಂದ 120 ಚ.ಮೀ.ಗಳಿಗೆ ಹೆಚ್ಚಿಸಲು ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಸಮ್ಮತಿ ನೀಡಲಾಗಿದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಅದೇ ರೀತಿ ಎಂಐಜಿ-2ನೇ ವರ್ಗದ ಬಳಸಬಹುದಾದ ಪ್ರದೇಶದ ಅಳತೆಯನ್ನು 110 ಚ.ಮೀ.ಗಳಿಂದ 150 ಚ.ಮೀ.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ (ಎನ್‍ಎಆರ್‍ಇಡಿಸಿಒ), ಭಾರತ ರಿಯಲ್ ಎಸ್ಟೇಟ್ ಅಭಿವೃದ್ದಿಗಾರರ ಸಂಘಗಳ ಒಕ್ಕೂಟ (ಸಿಆರ್‍ಇಡಿಎಐ) ಸೇರಿದಂತೆ ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳು ಸ್ವಾಗತಿಸಿವೆ.

Facebook Comments

Sri Raghav

Admin