ಟಿಪ್ಪು ಜಯಂತಿ ಆಚರಿಸಿದ ಕಾನ್‍ಸ್ಟೇಬಲ್ ಸಸ್ಪೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

poli
ತುಮಕೂರು,ನ.17- ಒಂದು ಧರ್ಮಕ್ಕೆ ಸಪೋರ್ಟ್ ಮಾಡಿದರೆಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್‍ಸ್ಟೆಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಪಾವಡಗ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಜಾವೇದ್ ಅಮಾನತುಗೊಂಡ ಕಾನ್‍ಸ್ಟೆಬಲ್. ಟಿಪ್ಪು ಜಯಂತಿಗೆ ರಜೆ ಹಾಕಿ ಟಿಪ್ಪು ಜಯಂತಿ ಆಚರಣೆ ಮಾಡುವುದಕ್ಕೆ ಒಂದು ಧರ್ಮದ ಜನರನ್ನು ಕೂಡಿ ಹಾಕಿ ಆಚರಣೆ ಮಾಡಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ

Facebook Comments