ತಂಬಾಕು ಉತ್ಪನ್ನ ಮಾರಾಟ ಮಾಡಿದರೆ ದಂಡ ; ಬೇಲೂರು ತಹಸೀಲ್ದಾರ್ ಪರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

gutka-1
ಬೇಲೂರು, ನ.17- ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ನಿಷೇದಿಸಲಾಗಿದ್ದು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ. ಕಾನೂನು ಮೀರಿ ಮಾರಾಟ ಮಾಡಿದ ವ್ಯಕ್ತಿಗಳಿಗೆ 200 ರಿಂದ 2000 ರೂ. ದಂಡ ವಿಧಿಸುವ ಅವಕಾಶವಿದೆ ಎಂದು ಬೇಲೂರು ತಹಸೀಲ್ದಾರ್ ಪರಮೇಶ್ ಹೇಳಿದರು. ತಂಬಾಕು ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಅವರು. ತಂಬಾಕು ಉಪಯೋಗಿಸುವುದರಿಂದ ಹಲವು ರೀತಿಯ ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ, ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮೊದಲು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಜಿಲ್ಲಾಧಿಕಾರಿಗಳ ಆದೇಶದಂತೆ ತಾಲ್ಲೂಕು ಮಟ್ಟದ ತಂಬಾಕು ನಿಯಂತ್ರ ತನಿಖಾ ದಳವನ್ನು ರಚಿಸಿದ್ದು, ಆರೋಗ್ಯ, ಪೆÇಲೀಸ್, ತಾಪಂ, ಶಿಕ್ಷಣ, ಪುರಸಭೆ, ತಾಲ್ಲೂಕು ಉಚಿತ ಕಾನೂನು ಸೇವಾ ಪ್ರಾಧಿಕಾರ, ಸಾರಿಗೆ, ತಾಲ್ಲೂಕು ಮಕ್ಕಳ ರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಪ್ರವಾಸೋದ್ಯಮ, ಪರಿಸರ ಹಾಗೂ ಮಾಲಿನ್ಯ ಇಲಾಖೆಗೆ ಸೇರಿದ ಅಧಿಕಾರಿಗಳು ತನಿಖಾದಳದ ಸದಸ್ಯರಾಗಿರುತ್ತಾರೆ. ಎಲ್ಲಿಯೂ ತಂಬಾಕು ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡದಂತೆ ಜಾಗೃತಿದಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ ಎಂದು ಸೂಚಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯೋಗೀಶ್ ಮಾತನಾಡಿ, ತಂಬಾಕು ಸೇವನೆಯಿಂದ ಬಾಯಿಹುಣ್ಣು, ಶ್ವಾಸಕೋಸದ ಕಾಯಿಲೆ, ಕ್ಯಾನ್ಸರ್ ಮತ್ತಿತರ ಭೀಕರ ಕಾಯಿಲೆಗಳು ಕಾಣಿಸಿಕೊಳ್ಳವುದರಿಂದ ಸಾರ್ವಜನಿಕರು ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ತಾಪಂನ ತಾರಾನಾಥ್ ನಾಯಕ್, ಸಂತೋಷ್, ಎಎಸ್‍ಐ ಪರಮೇಶ್ ಇನ್ನಿತರರಿದ್ದರು.

Facebook Comments

Sri Raghav

Admin