ದ.ಕ ಹಾಲು ಉತ್ಪಾದಕರ ಒಕ್ಕೂಟದಲ್ಲಿ ವಿವಿಧ ಉದ್ಯೋಗವಕಾಶಗಳು

ಈ ಸುದ್ದಿಯನ್ನು ಶೇರ್ ಮಾಡಿ

milk
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದಲ್ಲಿ ಲೆಕ್ಕ, ಮಾರುಕಟ್ಟೆ, ಆಡಳಿತ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ  ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ : 21

ಹುದ್ದೆಗಳ ವಿವರ ;
1)ತಾಂತ್ರಿಕ ಅಧಿಕಾರಿ (ಡಿ ಟಿ)
2)ಡೈರಿ ಸೂಪರ್ ವೈಸರ್
3)ಲೆಕ್ಕ ಸಹಾಯಕರು
4)ಮಾರುಕಟ್ಟೆ ಸಹಾಯಕರು
5)ಆಡಳಿತ ಸಹಾಯಕರು
6)ಕಿರಿಯ ಸಿಸ್ಟಮ್ ಆಪರೇಟರ್
7)ಕೆಮಿಸ್ಟ್

ವಿದ್ಯಾರ್ಹತೆ : ಕ್ರ.ಸ 1 ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಮತ್ತು 2 ರಿಂದ 7 ರವರೆಗಿನ ಹುದ್ದೆಗಳಿಗೆ ಪದವಿ ಪೂರೈಸಿರಬೇಕು (ಹುದ್ದೆಗೆ ಸಂಬಂಧಪಟ್ಟ ವಿಭಾಗಗಳಲ್ಲಿ)

ವಯೊಮಿತಿ : ಕನಿಷ್ಟ 18 ವರ್ಷ ಗರಿಷ್ಟ 35 ವಯಸ್ಸನ್ನು ನಿಗದಿಗೊಳಿಸಲಾಗಿದೆ. ಮಿಸಲಾತಿ ಪಡೆಯುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 450 ರೂ, ಪ.ಜಾ, ಪ.ಪ, ಪ್ರವರ್ಗ 1, ಮಾಜಿ ಸೈನಿಕ ಹಾಗೂ ಅಂಗವಿಕಲರಿಗೆ 250 ಶುಲ್ಕ ನಿಗದಿಗೊಳಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 06-12-2017

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.dkmul.com  ಗೆ ಭೇಟಿ ನೀಡಿ

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

Facebook Comments

Sri Raghav

Admin