‘ಪದ್ಮಾವತಿ’ ಬೆಂಬಲಕ್ಕೆ ಬಂದ ಪ್ರಕಾಶ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash-Raj--02

ಬೆಂಗಳೂರು, ನ.17-ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮೂಗನ್ನು ಶೂರ್ಪನಖಿ ರೀತಿಯಲ್ಲಿ ಕತ್ತರಿಸಲಾಗುವುದು ಎಂದು ರಜಪೂತ ಕರ್ನಿ ಸೇನೆಯ ಬೆದರಿಕೆ ಹೇಳಿಕೆ ಬಗ್ಗೆ ಖ್ಯಾತ ನಟ ಪ್ರಕಾಶ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ವಿವಾದಾತ್ಮಕ ಚಿತ್ರ ಪದ್ಮಾವತಿಗೆ ಬೆಂಬಲ ಸೂಚಿಸಿದ ಗಣ್ಯರಲ್ಲಿ ಪಕಾಶ್ ರೈ ಕೂಡ ಒಬ್ಬರು. ಚಿತ್ರಗಳು ಮತ್ತು ಕಲಾವಿದರಿಗೆ ಹಾಕಲಾಗುತ್ತಿರುವ ಬೆದರಿಕೆ ಕರೆಗಳ ಬಗ್ಗೆ ಟ್ವೀಟರ್‍ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಬ್ಬರು ಮೂಗು ಕತ್ತರಿಸಬೇಕೆಂದಿದ್ದರೆ(ದೀಪಿಕಾ ಪಡುಕೋಣೆ), ಇನ್ನೊಬ್ಬರು ಕಲಾವಿದರ ತಲೆ ಕಡಿಯಬೇಕೆಂದಿದ್ದಾರೆ, ಮತ್ತೊಬ್ಬರು ನಟನಿಗೆ(ಕಮಲ್ ಹಾಸನ್) ಗುಂಡಿಕ್ಕಿ ಕೊಲ್ಲಬೇಕೆಂದಿದ್ದಾರೆ. ಇವು ಅಸಹಿಷ್ಣುತೆ ಕೃತ್ಯಗಳಲ್ಲವೇ ? ಎಂದು ರೈ ಪ್ರಶ್ನಿಸಿದ್ದಾರೆ. ಆದರೂ ಇದನ್ನು ಅಸಹಿಷ್ಣುತೆ ಕೃತ್ಯಗಳಲ್ಲ ಎಂಬುದಾಗಿ ನಾವು ನಂಬಲು ನೀವು ಬಯಸಿದ್ದೀರಿ ಎಂದು ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ನಮ್ಮ ದೇಶದಲ್ಲಿ ಪದ್ಮಾವತಿ, ಮರಾಠಿಯ ನ್ಯೂಡ್ ಮತ್ತು ಮಲೆಯಾಳಂನ ಎಸ್. ದುರ್ಗಾದಂಥ ಚಿತ್ರಗಳ ಬಗ್ಗೆ ಒಂದು ಸಮೂಹ ತಳೆದಿರುವ ದೃಷ್ಟಿಯ ಬಗ್ಗೆ ಪ್ರಶ್ನಿಸಿರುವ ಹಿರಿಯ ನಟ, ಚಿತ್ರರಂಗದ ಪ್ರತಿಭಾವಂತರ ಧ್ವನಿಗಳನ್ನು ಅದುಮಿಡಲಾಗುತ್ತಿದೆ, ಅವರನ್ನು ಭಯಭೀತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin