ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

wap

ಬೀದರ್,ನ.18-ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ ಪೊಲೀಸರು ಅವರಿಂದ ನಾಡ ಪಿಸ್ತೂಲ್ ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೀದರ್‍ನವರೇ ಆದ ಬಾಲಾಜಿ, ಚಂದ್ರಕಾಂತ್, ಜಹೀರ್ ಮತ್ತು ಉತ್ತರಪ್ರದೇಶ ಮೂಲದ ರುಸ್ತುಮ್ ಬಂಧಿತ ಆರೋಪಿಗಳು.

ಈ ನಾಲ್ವರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆ ಎಂಬ ಮಾಹಿತಿ ಪಡೆದ ಬೀದರ್‍ನ ಗಾಂಧಿಗಂಜ್ ಠಾಣೆ ಪೆÇಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಅವರಿಂದ ಮೂರು ನಾಡಪಿಸ್ತೂಲು ಮತ್ತು ಎಂಟು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನಾಲ್ವರು ಮೈಲೂರು ಕ್ರಾಸ್‍ನಲ್ಲಿರುವ ಚಂದ್ರಕಾಂತ್ ಮನೆಯಲ್ಲಿ ವಾಸ್ತವ್ಯವಿದ್ದು , ಅಕ್ರಮ ಶಸ್ತ್ರಾಸ್ತ್ರಗಳನ್ನು ಶೇಖರಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Facebook Comments

Sri Raghav

Admin