ಔರಾದ್ ಕ್ಷೇತ್ರದಿಂದ ಸಿಎಂ ಆಪ್ತ ಅಧಿಕಾರಿ ಡಾ.ಸಿಂಧೆಗೆ ಕಾಂಗ್ರೆಸ್ ಟಿಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-01

ಬೆಂಗಳೂರು, ನ.18- ಬೀದರ್ ಜಿಲ್ಲೆ ಔರಾದ್  ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಅಧಿಕಾರಿ ಸಿಂಧೆ ಅವರೇ ಅಭ್ಯರ್ಥಿ. ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿಗಳಾದ ಡಾ.ಸಿಂಧೆ ಭೀಮಸೇನರಾವ್ 2018ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸಿಂಧೆಗೆ ಟಿಕೆಟ್ ನೀಡಲು ಗ್ರೀನ್‍ಸಿಗ್ನಲ್ ನೀಡಿರುವುದು ತಿಳಿದುಬಂದಿದೆ.

ಮುಖ್ಯಮಂತ್ರಿಗಳ ಸಲಹೆ ಮೇರೆಗೆ ಸಿಂಧೆ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಡಾ.ಸಿಂಧೆ ಭೀಮಸೇನರಾವ್ ಕೇಂದ್ರದ ಮಾಜಿ ಸಚಿವ ದಿ.ವಿ.ಶಂಕರಾನಂದ ಅವರ ಅಳಿಯ. ಔರದ್ ಮತಕ್ಷೇತ್ರಕ್ಕೂ ಸೇರಿದವರು. 2014ರಲ್ಲಿ ಇವರು ಸರ್ಕಾರಿ ಹುದ್ದೆಯಿಂದ ನಿವೃತ್ತರಾಗಿದ್ದು, ಸಿಎಂ ಪರಿಹಾರ ನಿಧಿಯಲ್ಲಿ ಕೆಲಸ ಮಾಡುತ್ತಿದ್ದರು.

ನಂತರ ಸಿಎಂ ನಾಲ್ಕು ವರ್ಷಗಳಿಗೆ ಇವರ ಸೇವೆಯನ್ನು ವಿಸ್ತರಿಸಿದ್ದರು. 2018ರ ಮೇ 13ಕ್ಕೆ ಸಿಂಧೆ ಸೇವಾವಧಿ ಕೊನೆಗೊಳ್ಳಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಸಿಂಧೆ ಸಿಎಂ ಅಪರ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದು, ಚುನಾವಣೆವರೆಗೆ ಕ್ಷೇತ್ರದಲ್ಲೇ ಇರುವಂತೆ ಅವರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸದ್ಯ ಔರದ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಭು ಚೌಹಾಣ್ ಶಾಸಕರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿ ಸಿಗದೆ ಮುಂಬೈ ಮೂಲದ ಗಾಯಕ್‍ವಾಡ್ ಎಂಬುವರಿಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಸ್ಥಳೀಯರೇ ಆದ ಐಎಎಸ್ ಅಧಿಕಾರಿ ಸಿಂಧೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin