ಬಿಎಂಟಿಸಿ ಬಸ್ ಗಳಿಗೆ ಸಿಕ್ತು ‘ಸ್ವಚ್ಛತಾ ಭಾಗ್ಯ’

ಈ ಸುದ್ದಿಯನ್ನು ಶೇರ್ ಮಾಡಿ

BMTC-Bus--02

ಬೆಂಗಳೂರು, ನ.19- ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸಾರ್ವಜನಿಕರಿಗೆ ಸಮೂಹ ಸಾರಿಗೆಯಾದ ಬಿಎಂಟಿಸಿ ಮೇಲೆ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಂದು ಸಿಬ್ಬಂದಿಗಳು ಬಸ್‍ಗಳ ಸ್ವಚ್ಛತಾ ಕಾರ್ಯ ನಡೆಸಿ ಗಮನ ಸೆಳೆದರು. ಸ್ವತಃ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೇ ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದರಿಂದ ಪ್ರೇರೇಪಿತರಾದ ಚಾಲಕರು, ಮತ್ತು ನಿರ್ವಹಣಾ ವಿಭಾಗದ ಸಿಬ್ಬಂದಿಗಳು ಬಸ್‍ಗಳ ಒಳಗೆ ಆಸನಗಳು, ಮೇಲ್ಭಾಗವನ್ನೆಲ್ಲ ಒರೆಸಿ ಸ್ವಚ್ಛಗೊಳಿಸಿದರು.

ಈಗಾಗಲೇ ಪ್ರಯಾಣಿಕರ ಸುರಕ್ಷತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಬಿಎಂಟಿಸಿ ಎಲ್ಲರ ಮೆಚ್ಚುಗೆ ಪಡೆಯುವಂತಹ ಕಾರ್ಯಗಳನ್ನು ಮಾಡುತ್ತದೆ ಎಂದು ಎಂಡಿ ಉಮಾಶಂಕರ್ ತಿಳಿಸಿದರು. ಇದೇ ವೇಳೆ ಉತ್ತಮ ನಿರ್ವಹಣೆ ಮತ್ತು ಸ್ವಚ್ಛತೆ ಕಾಯ್ದುಕೊಂಡಿರುವ ಘಟಕ 17ರ ಚಾಲನಾ ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು.

Facebook Comments

Sri Raghav

Admin