ಮಾತನಾಡದ ಪ್ರಿಯತಮ, ವಿಡಿಯೋ ಮಾಡಿತ್ತು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆ..!

ಈ ಸುದ್ದಿಯನ್ನು ಶೇರ್ ಮಾಡಿ

Girl-Suicide--02

ತುಮಕೂರು, ನ.19-ಪ್ರೀತಿಸುವ ಹೃದಯಗಳೇ ಹಾಗೆ…ತಾನು ಪ್ರೀತಿಸಿದವರಿಂದ ಒಂದು ಸಣ್ಣ ನಿರ್ಲಕ್ಷ್ಯವನ್ನೂ ಸಹಿಸದು.. ಅಂತಹುದೇ ಕಾರಣಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಎಸ್‍ಎಸ್‍ಪುರದಲ್ಲಿರುವ ಹಾಸ್ಟೆಲ್‍ನ ಯುವತಿಯೊಬ್ಬಳು ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಹಾಸ್ಟೆಲ್‍ಗೆ ತೆರಳಿದ್ದಾಳೆ. ತಾನು ಪ್ರೀತಿಸಿದ ಯುವಕ ಸರಿಯಾಗಿ ಮಾತನಾಡುತ್ತಿಲ್ಲ. ತನ್ನ ಭೇಟಿ ಮಾಡಿ ತುಂಬ ದಿನಗಳಾಯ್ತು ಎಂದು ನೊಂದು 30 ಮಾತ್ರೆಗಳನ್ನು ನುಂಗಿದ್ದಾಳೆ. ಇದನ್ನು ವಿಡಿಯೋ ಮಾಡಿ ಪ್ರೀತಿಸಿದ ಯುವಕನಿಗೆ ಮತ್ತು ಗೆಳತಿಗೆ ಕಳುಹಿಸಿದ್ದಾಳೆ.

ವಿಡಿಯೋದಲ್ಲಿ ಸ್ನೇಹಿತೆ ಮತ್ತು ಪ್ರೇಮಿಗೆ ನಾನು ಸಾಯುತ್ತಿದ್ದೇನೆ. ನೀವು ನನ್ನ ಕ್ಷಮಿಸಿ ಇನ್ಮೇಲೆ ನಾನು ಯಾವತ್ತು ನಿಮಗೆ ನೋವು ಮಾಡುವುದಿಲ್ಲ ಎಂದು ವಿಡಿಯೋ ಸಂದೇಶ ಕಳುಹಿಸಿದ್ದಾಳೆ. ತಕ್ಷಣ ವಿಡಿಯೋ ನೋಡಿದ ಪ್ರಿಯಕರ ಎಚ್ಚೆತ್ತು ಹಾಸ್ಟೆಲ್ ಬಳಿ ಹೋಗಿ ಅಸ್ವಸ್ಥಗೊಂಡಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಿದ್ದಾನೆ.
ಈ ಬಗ್ಗೆ ಹೊಸ ಬಡಾವಣೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin