ವಾಟ್ಸಾಪ್‍ನಲ್ಲಿ ಅಶ್ಲೀಲ ಮೆಸೇಜ್ ಮಾಡಿದ ಪ್ರಾಂಶುಪಾಲನ ಅಮಾನತ್ತಿಗೆ ವಿದ್ಯಾರ್ಥಿಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Whatsappa--01

ಬೇಲೂರು, ನ.19-ವಾಟ್ಸಾಪ್ ಗ್ರೂಪ್‍ನಲ್ಲಿ ಬಾಲಕಿಯೊಬ್ಬಳ ಭಾವಚಿತ್ರದೊಂದಿಗೆ ಅಶ್ಲೀಲ ಪದ ಬಳಸಿದ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯ್ಯಣ್ಣಗೌಡರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.  ಬೇಲೂರಿನ ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಯ್ಯಣ್ಣಗೌಡರನ್ನು ಅಮನತುಗೊಳಿಸಬೇಕೆಂದು ಒತ್ತಾಯಿಸಿ ಕಾಲೇಜು ಮುಂಭಾಗ ಪ್ರತಿಭಟಿಸಿ ಮಾತನಾಡಿದ ಎಬಿವಿಪಿ ಸಂಚಾಲಕ ಶ್ರೀಕಾಂತ್, ವಾಟ್ಸಾಪ್ ಗ್ರೂಪ್‍ನಲ್ಲಿ ಬಾಲಕಿಯ ಭಾವಚಿತ್ರದೊಂದಿಗೆ ಅಶ್ಲೀಲ ಪದ ಬಳಕೆ ಮಾಡಿರುವ ಪ್ರಾಂಶುಪಾಲ ಜಯ್ಯಣ್ಣಗೌಡರ ವರ್ತನೆ ಖಂಡನೀಯ ಎಂದರು.

ಪ್ರಾಂಶುಪಾಲ ಜಯ್ಯಣ್ಣಗೌಡ ಇಂತಹ ಇನ್ನೆಷ್ಟು ಹೆಣ್ಣು ಮಕ್ಕಳ ಭವಿಷ್ಯವನ್ನು ಹಾಳು ಮಾಡಿಯಾರು. ತಕ್ಷಣವೆ ಸಂಬಂಧಿಸಿದ ಅಧಿಕಾರಿಗಳು ಅಮಾನತ್ತು ಪಡಿಸಬೇಕು ಎಂದು ಒತ್ತಾಯಿಸಿದರು. ವೈಡಿಡಿ ಕಾಲೇಜಿನ ವಿದ್ಯಾರ್ಥಿ ಮೋಹನ್ ಮಾತನಾಡಿ, ಪ್ರಾಂಶುಪಾಲ ಜಯ್ಯಣ್ಣಗೌಡರು ಸಣ್ಣ ಪುಟ್ಟದ್ದಕೂ ಮನಸ್ಸಿಗೆ ಬಂದಂತೆ ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತಾರೆ. ಅಲ್ಲದೆ ಇಂತಹ ಕೃತ್ಯವೆಸಗಿರುವ ಪ್ರಾಂಶುಪಾಲರನ್ನು ಅಮನಾತುಗೊಳಿಸಿ ತಕ್ಕ ಶಿಕ್ಷೆ ಕೊಡಬೇಕು ಎಂದರು.  ತಹಸೀಲ್ದಾರ್ ಪರಮೇಶ್ ಮೂಲಕ ಜಿಲ್ಲಾಧಿಕಾರಿ ಹಾಗೂ ಮೈಸೂರು ವಿವಿ ಜೆಡಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ನೀಲಕಂಠ, ಶಿವು, ವಿದ್ಯಾರ್ಥಿಗಳಾದ ಲೋಕೇಶ್, ರಮೇಶ್, ಗಣೇಶ್, ಪ್ರಕಾಶ್ ಇನ್ನಿತರರಿದ್ದರು.

Facebook Comments

Sri Raghav

Admin