ಅಕ್ರಮ ಗಾಂಜಾ ಮಾರಾಟಗಾರನ ಬಂಧನ, ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

chinta
ಚಿಂತಾಮಣಿ, ನ.20-ತಾಲೂಕಿನ ಬೆಂಗಳೂರು ರಸ್ತೆಯ ಚಿನ್ನಸಂದ್ರ ಗ್ರಾಮದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಗ್ರಾಮಾಂತರ ಠಾಣೆ ಪೊಲೀಸರು ಆತನಿಂದ 400 ರೂ ನಗದು ಮತ್ತು 40 ಸಾವಿರ ಮೌಲ್ಯದ ಬೆಲೆ ಬಾಳುವ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿನ್ನಸಂದ್ರ ಗ್ರಾಮದ ಫಯಾಜ್ ಬಿನ್ ಅಮೀರ್ ಸಾಬ್ (32) ಬಂಧಿತ ಆರೋಪಿ. ಖಚಿತ ಮಾಹಿತಿಯ ಮೇರೆಗೆ ಡಿವೈಎಸ್‍ಪಿ ನಾಗೇಶ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಪಿಎಸ್‍ಐ ಲಿಯಾಖತ್ ಮತ್ತು ಸಿಬ್ಬಂದಿಯಾದ ಚಂದ್ರಶೇಖರ್, ಚನ್ನಕೇಶವ, ಅನಂದ್, ಬಾಬಾಜಾನ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯಿಂದ 400 ರೂ. ನಗದು, 40 ಸಾವಿರ ಬೆಲೆಬಾಳುವ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಎಸ್.ಎನ್. ಜಯಚಂದ್ರ, ಕಸಬಾ ಹೋಬಳಿ ಕಂದಾಯ ಇಲಾಖೆಯ ರಾಜಸ್ವ ನೀರಿಕ್ಷಕ ಮಂಜುನಾಥ್, ತಾಲೂಕು ಕಚೇರಿಯ ದ್ವಿ.ದ.ಸ.ನೌಕರ ಶಿವಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Facebook Comments