‘ಪದ್ಮಾವತಿ’ಗೆ ಬಂಡವಾಳ ಹಾಕಿದ್ದು ದಾವೂದ್ ಇಬ್ರಾಹಿಂ..!

ಈ ಸುದ್ದಿಯನ್ನು ಶೇರ್ ಮಾಡಿ

Padmavati----001244

ಜೈಪುರ, ನ.20-ವಿವಾದದ ಕೇಂದ್ರ ಬಿಂದುವಾಗಿರುವ ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ತಲೆ ಕತ್ತರಿಸುವುದಾಗಿ ಹಾಗೂ ನಟಿ ದೀಪಿಕಾ ಪಡುಕೋಣೆಯ ಮೂಗು ಕುಯ್ಯುವುದಾಗಿ ಬೆದರಿಕೆ ಹಾಕಿದ್ದ ಶ್ರೀ ರಜಪೂತ ಕರ್ನಿ ಸೇನೆ, ಈ ಸಿನಿಮಾಗೆ ಕುಖ್ಯಾತ ಭೂಗತ ಪಾತಕಿ ಮತ್ತು ಭಯೋತ್ಪಾದಕ ದಾವೂದ್ ಇಬ್ರಾಹಿಂ ಬಂಡವಾಳ ಹೂಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದೆ.

ಸಂಜಯ್ ಬನ್ಸಾಲಿ ಒಬ್ಬ ಸಾಂಸ್ಕøತಿಕ ಗೂಂಡಾ, ಸಮಯಸಾಧಕ, ಕುತಂತ್ರಿ ಮತ್ತು ಅಪರಾಧಿ ಎಂದು ಆರೋಪಿಸಿರುವ ಸೇನೆಯ ಲೋಕೇಂದ್ರ ಸಿಂಗ್ ಕಲ್ವಿ, ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿರುವುದು ನಿರ್ದೇಶಕನ ದೊಡ್ಡ ನಾಟಕದ ಭಾಗವೇ ಆಗಿದೆ ಎಂದು ಟೀಕಿಸಿದ್ದಾರೆ. ಚಿತ್ರ ಬಿಡುಗಡೆಯ ಮುಂದಿನ ದಿನಾಂಕ ಘೋಷಣೆಯಾಗುತ್ತಿದ್ದಂತೆ ನಾವು ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಪದ್ಮಾವತಿ ತೆರೆ ಕಾಣಲು ಬಿಡುವುದಿಲ್ಲ. ಈ ಚಿತ್ರದ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂಬುದು ನಮ್ಮ ಒಕ್ಕೊರಲ ಆಗ್ರಹವಾಗಿದೆ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin