13 ಗಂಟೆ 31 ನಿಮಿಷ ತಡೆರಹಿತ ಹಾರಾಡಿ ವಿಶ್ವ ದಾಖಲೆ ಮಾಡಿದ ಹೆರ್ಕ್ಯುಲೆಸ್ ವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

IAF--02
ನವದೆಹಲಿ, ನ.20-ಭಾರತೀಯ ವಾಯು ಪಡೆಯು ಸಿ-130 ಸೂಪರ್ ಹಕ್ರ್ಯೂಲಿಸ್ ವಿಮಾನವು ಅತ್ಯಂತ ದೀರ್ಘಕಾಲ ತಡೆರಹಿತ (ನಾನ್‍ಸ್ಟಾಪ್) ಹಾರಾಟ ನಡೆಸಿ ವಿಶ್ವ ದಾಖಲೆ ನಿರ್ಮಿಸಿದೆ. ಹಕ್ರ್ಯೂಲಿಸ್ ವಿಮಾನವು 13 ಗಂಟೆಗಳು ಮತ್ತು 31 ನಿಮಿಷ ಕಾಲ ನಿರಂತರ ಹಾರಾಟ ನಡೆಸಿದೆ. ಐಎಎಫ್ ದಾಖಲೆ ಮಾತ್ರವಲ್ಲ. ಇದು ವಿಶ್ವ ದಾಖಲೆಯೂ ಆಗಿದೆ ಎಂದು ವಾಯು ಪಡೆ ಟ್ವೀಟ್ ಮಾಡಿದೆ.

ನವೆಂಬರ್ 18ರಂದು ಹಾರಾಟ ಆರಂಭಿಸಿದ ತಂಡವು 13.31 ಗಂಟೆಗಳ ಬಳಿಕ ಸಂಜೆ 6.31ಕ್ಕೆ ಭೂಸ್ಪರ್ಶ ಮಾಡಿತು. ಇದಕ್ಕೆ ಅತ್ಯಂತ ಕೌಶಲ್ಯ ಮತ್ತು ಸಾಮಥ್ರ್ಯ ಬೇಕು. ಈ ದೀರ್ಘಯಾನದಲ್ಲಿ ಐಎಎಫ್ ಸಾಹಸಿಗಳು ಯಶಸ್ವಿಯಾಗಿದ್ದಾರೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿ-130 ಹಕ್ರ್ಯೂಲಿÉಸ್ ನಾಲ್ಕು ಎಂಜಿನ್‍ಗಳ ಸೇನಾ ಸಾಗಣೆ ವಿಮಾನವಾಗಿದೆ. ಅಮೆರಿಕದ ಲಾಕ್‍ಹೀಡ್‍ನಲ್ಲಿ ಈ ವಿಮಾನವನ್ನು ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಈ ಮಾದರಿಯ ಒಟ್ಟು 13 ವಿಮಾನಗಳು ವಾಯುಪಡೆ ಸೇವೆಯಲ್ಲಿವೆ.

Facebook Comments

Sri Raghav

Admin