ಅತ್ಯಾಚಾರ ಆರೋಪದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಬಿ.ಮೊಹಂತಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

bbm
ಜೈಪುರ್, ನ.21-ನಾಲ್ಕು ವರ್ಷಗಳ ಹಿಂದೆ 23 ವರ್ಷದ ಯುವತಿ ಮೇಲೆ ಆತ್ಯಾಚಾರ ಎಸಗಿದ ಆರೋಪದ ಮೇಲೆ ನಿವೃತ್ತ ಐಎಎಸ್ ಅಧಿಕಾರಿ ಬಿ.ಬಿ.ಮೊಹಂತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2014ರಲ್ಲಿ ಮೊಹಂತಿ ರಾಜಸ್ತಾನ್ ಸಿವಿಲ್ ಸರ್ವಿಸಸ್ ಅಪೆಟೇಟ್ ಟ್ರಿಬ್ಯೂನಲ್ (ನಾಗರಿಕ ಸೇವಾ ಮೇಲ್ಮನವಿ ನ್ಯಾಯಾಧಿಕರಣ) ಅಧ್ಯಕ್ಷರಾಗಿದ್ದಾಗ ಅವರ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿತ್ತು.
ನಿನ್ನೆ ತಡ ರಾತ್ರಿ ಪೊಲೀಸರಿಗೆ ಶರಣಾದ ಅವರನ್ನು ಬಂಧಿಸಿ ಇಂದು ಸ್ಥಳೀಯ ಕೋರ್ಟ್‍ಗೆ ಹಾಜರುಪಡಿಸಲಾಯಿತು. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಸಹಾಯ ಮಾಡುವ ಸೋಗಿನಲ್ಲಿ ಯುವತಿ ಮೇಲೆ ಮೊಹಂತಿ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ.

Facebook Comments

Sri Raghav

Admin