ಮನೆ ಮಾರಿ ನಿರ್ಮಿಸಿದ ವಿಮಾನಕ್ಕೆ ಮೋದಿ ಹೆಸರಿಟ್ಟ..! ರಾಷ್ಟ್ರದ ಗಮನ ಸೆಳೆದ ವಿಶೇಷ ವಿಮಾನ.

ಈ ಸುದ್ದಿಯನ್ನು ಶೇರ್ ಮಾಡಿ

mum-1
ಮುಂಬೈ, ನ.21-ಕೇಂದ್ರ ಸರ್ಕಾರದ ಕೋಟ್ಯಂತರ ರೂಪಾಯಿಗಳ ನೆರವು ಪಡೆದು ಬೃಹತ್ ಕಂಪನಿಗಳು ಮಾಡಲು ಸಾಧ್ಯವಾಗದಿರುವ ದೊಡ್ಡ ಸಾಧನೆಯೊಂದನ್ನು ಮುಂಬೈನ ಅಮೋಲ್ ಯಾದವ್ ಕಾರ್ಯಗತಗೊಳಿಸುವಲ್ಲಿ ಸಫಲರಾಗಿದ್ದಾರೆ. ತನ್ನ ಮನೆಯಲ್ಲೇ ಆರು ಆಸನಗಳ ವಿಮಾನವನ್ನು ಒಬ್ಬಂಟಿಯಾಗಿ ನಿರ್ಮಿಸಿರುವ ಅಮೋಲ್ ಸಾಧನೆ ಅಮೂಲ್ಯವಾದುದು. ತಮ್ಮ ಮಹತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸಲು ಇವರು ಯಾರ ಬಳಿ ಕೈ ಒಡ್ಡದೇ ತಮ್ಮ ಮನೆಯನ್ನು ಮಾರಿ 4 ಕೋಟಿ ರೂ.ಗಳ ವೆಚ್ಚ ಮಾಡಿದ್ದಾರೆ.

ವಾಣಿಜ್ಯ ನಗರಿ ಮುಂಬೈನ ಕಾಂಡಿವಲಿಯ ತಮ್ಮ ಮನೆಯ ತಾರಸಿ ಮೇಲೆ ಆರು ವರ್ಷಗಳ ಕಾಲ ತಮ್ಮ ಅಗಾಧ ಪ್ರತಿಭೆ ಮತ್ತು ಪರಿಶ್ರಮವನ್ನು ಧಾರೆ ಎರೆದು ನಿರ್ಮಿಸಿರುವ ಈ ಲಘು ವಿಮಾನಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ನಾಮಕರಣ ಮಾಡಿದ್ದು ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಅಕ್ಷರಶ: ಅನುಷ್ಠಾನಗೊಳಿಸಿದ್ದಾರೆ. ಬಾಲ್ಯದಿಂದಲೂ ವಿಮಾನಗಳ ಬಗ್ಗೆ ಅದಮ್ಯ ಉತ್ಸಾಹ ಹೊಂದಿರುವ ಅಮೋಲ್ ಈ ಸಾಧನೆ ದೊಡ್ಡ ಸಂಬಳ ಪಡೆಯುವ ಅಧಿಕಾರ ಶಾಹಿಗಳು ಮತ್ತು ತಂತ್ರಶಿಲ್ಪಿಗಳ ತಲೆ ತಗ್ಗಿಸುವಂತೆ ಮಾಡಿದೆ.

ತಾವು ನಿರ್ಮಿಸಿರುವ ಆರು ಆಸನಗಳ ಏರ್‍ಕ್ರಾಫ್ಟ್ ವೀಕ್ಷಿಸುವಂತೆ ವಿಮಾನಯಾನ ಇಲಾಖೆಗೆ ಸಾಕಷ್ಟು ಬಾರಿ ಹಾದಿ ಸವೆಸಿದ ನಂತರ ಅಮೋಲ್ ನಿರ್ಮಿಸಿದ ವಿಮಾನ ನೋಡಿ ಉನ್ನತಾಧಿಕಾರಿಗಳು ದಂಗಾದರು. ಅಲ್ಲದೇ ತಡ ಮಾಡದೇ ಡಿಜಿಸಿಎ(ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ)ನೋಂದಣಿ ಪ್ರಮಾಣಪತ್ರ ದೊರೆಕಿಸಿಕೊಟ್ಟಿದ್ಧಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಹ ಈ ಲಘು ವಿಮಾನವನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಪ್ರಶಂಸಿಸಿದ್ದಾರೆ ಅಲ್ಲದೇ ಈ ಪ್ರತಿಭಾವಂತ ಮತ್ತಷ್ಟು ಅನ್ವೇಷಣೆಗೆ ನೆರವಾಗಬೇಕೆಂದು ಮುಖ್ಯಮಂತ್ರಿ ಪ್ರಧಾನಿ ಮೋದಿಗೆ ವೈಯಕ್ತಿಕವಾಗಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin