ಐಟಿಐ ಶಿಕ್ಷಣ ಶುಲ್ಕ ನಾಲ್ಕು ಪಟ್ಟು ಹೆಚ್ಚಳ..! ವಿದ್ಯಾರ್ಥಿಗಳಿಗೆ ಶಾಕ್ ನೀಡಲಿದೆ ರಾಜ್ಯಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

santodh

ಬೆಳಗಾವಿ(ಸುವರ್ಣಸೌಧ), ನ.22-ಐಟಿಐ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಶಾಕಿಂಗ್ ನ್ಯೂಸ್. ಮುಂದಿನ ವರ್ಷದಿಂದ ತರಬೇತಿದಾರರ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ. 2006-07ನೇ ಸಾಲಿನಲ್ಲಿ ಪ್ರತಿ ತರಬೇತಿದಾರರಿಂದ 2,400 ರೂ. ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಅದನ್ನು ಕೇಂದ್ರ ಸರ್ಕಾರದ ಮಾನದಂಡದಂತೆ ಹೆಚ್ಚಿಸಲು ಪರಿಶೀಲನೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿರುವ ಐಟಿಐ ಕಾಲೇಜುಗಳಿಗೆ ತಾಂತ್ರಿಕ ವೃತ್ತಿಗಳಿಗೆ 15,000, ತಾಂತ್ರಿಕೇತರ ವೃತ್ತಿಗಳಿಗೆ 12,000, ನಗರ ಪ್ರದೇಶ ಐಟಿಐ ಕಾಲೇಜುಗಳಿಗೆ ತಾಂತ್ರಿಕ ವೃತ್ತಿಗಳಿಗೆ 15,500, ತಾಂತ್ರಿಕೇತರ ವೃತ್ತಿಗಳಿಗೆ 13,200ರೂ. ಶುಲ್ಕ ನಿಗದಿಪಡಿಸಿದೆ. ಈ ಸಂಬಂಧ ಸರ್ಕಾರ ಜನಪ್ರತಿನಿಧಿಗಳ ಸಭೆ ಕರೆದು ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

Facebook Comments

Sri Raghav

Admin