ಮೋದಿಯವರ ತಲೆ ಕಡಿಯಲು ಬಿಹಾರದಲ್ಲಿ ಅನೇಕರು ಸಿದ್ಧ : ಲಾಲೂ ಪತ್ನಿ ರಾಬ್ಡಿ ದೇವಿ ವಿವಾದಾತ್ಮಕ ಹೇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

bihar

ಪಾಟ್ನಾ, ನ.22-ಬಿಹಾರದಲ್ಲಿ ಅನೇಕ ಮಂದಿ ಪ್ರಧಾನಿ ನರೇಂದ್ರ ಮೋದಿಯವರ ಕುತ್ತಿಗೆ ಸೀಳಲು ಅಥವಾ ತಲೆ ಕತ್ತರಿಸಲು ಸಿದ್ಧರಾಗಿದ್ದಾರೆ ಎಂದು ಹೇಳುವ ಮೂಲಕ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿಯವರನ್ನು ಯಾರಾದರೂ ಟೀಕಿಸಿದರೆ ಅವರ ಬೆರಳು ಮತ್ತು ಕೈಯನ್ನು ಕತ್ತರಿಸುವುದಾಗಿ ಬಿಹಾರದ ಬಿಜೆಪಿ ಮುಖ್ಯಸ್ಥ ನಿತ್ಯಾನಂದ ರಾಯ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದ ಬೆನ್ನಲ್ಲೇ ಆರ್‍ಜೆಡಿ ನಾಯಕಿಯೂ ಆಗಿರುವ ರಾಬ್ಡಿ ದೇವಿ ಮೋದಿ ತಲೆ ಕಡಿಯುವ ಮಾತುಗಳನ್ನಾಡಿ, ಕೇಸರಿ ಪಾಳಯವನ್ನು ಕೆಣಕಿದ್ದಾರೆ.

ಆರ್‍ಜೆಡಿಯ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಪರಮೋಚ್ಚ ನಾಯಕ ಲಾಲೂ ಪ್ರಸಾದ್ ಯಾದವ್‍ರನ್ನು ಹತ್ತನೆ ಬಾರಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಂತರ ರಾಬ್ಡಿ ದೇವಿ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಮೋದಿಯವರ ಕಡೆ ಬೊಟ್ಟ ಮಾಡಿದರೆ ಅವರ ಬೆರಳು ಮತ್ತು ಕೈಯನ್ನು ಕತ್ತರಿಸುವುದಾಗಿ ಬಿಜೆಪಿಯ ಕೆಲವು ಮುಖಂಡರು ಹೇಳುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ಆ ಕೆಲಸ ಮಾಡಲಿ ಎಂದು ಸವಾಲು ಹಾಕಿದ ದೇವಿ, ಬಿಹಾರದ ಜನರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ತಮ್ಮ ಕೈಯನ್ನು ಕತ್ತರಿಸಲು ಬಂದವರ ಕೈಗಳನ್ನು ಕಡಿದು ಹಾಕಲು ಕಾದು ಕುಳಿತಿದ್ಧಾರೆ. ಮೇಲಾಗಿ ಪ್ರಧಾನಿಯ ತಲೆ ಕತ್ತರಿಸಲು ಅನೇಕರು ಸಿದ್ದರಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

Facebook Comments

Sri Raghav

Admin