ಉಡುಪಿಯಲ್ಲಿ ಪೇಜಾವರ ಶ್ರೀ – ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ, ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

udupi
ಉಡುಪಿ, ನ.24-ಪುರಾಣ ಪ್ರಸಿದ್ಧ ಉಡುಪಿ ಕ್ಷೇತ್ರದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಇಂದಿನಿಂದ ಆರಂಭವಾಗಿರುವ ಧರ್ಮ ಸಂಸದ್ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆರ್‍ಎಸ್‍ಎಸ್ ರಾಷ್ಟ್ರೀಯ ಅಧ್ಯಕ್ಷ ಮೋಹನ್ ಭಾಗವತ್ ನಿನ್ನೆ ರಾತ್ರಿ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಶ್ರೀ ಕೃಷ್ಣ ಮಠದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.
ಈ ಭೇಟಿಯ ನಂತರ ಸುದ್ದಿಗಾರರಿಗೆ ಯಾವುದೇ ಮಾಹಿತಿ ನೀಡದೇ ಭಾಗವತ್ ಅಲ್ಲಿಂದ ನಿರ್ಗಮಿಸಿದರು. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಗೋ ರಕ್ಷಣೆ ಮತ್ತು ಮತಾಂತರ ತಡೆ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇವರಿಬ್ಬರ ಭೇಟಿಗೆ ಪ್ರಾಮುಖ್ಯತೆ ಲಭಿಸಿದೆ.

ಭಾರಿ ಬಂದೋಬಸ್ತ್: ಧರ್ಮ ಸಂಸದ್ ಸಭೆ ನಡೆಯುವ ಉಡುಪಿಯ ಕಲ್ಸಂಕ ಬಳಿ ಇರುವ ರಾಯಲ್ ಗಾರ್ಡನ್ಸ್‍ಗೆ ಪೊಲೀಸ್ ಮಹಾ ನಿರ್ದೇಶಕ ಹೇಮಂತ್ ನಿಂಬಾಳ್ಕರ್ ಭೇಟಿ ನೀಡಿ ಬಂದೋಬಸ್ತ್ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು. ನಂತರ ಹಿಂದೂ ಸಮಾಜೋತ್ಸವ ನಡೆಯುವ ಮೈದಾನಕ್ಕೂ ಭೇಟಿ ನೀಡಿ ಬಿಗಿಭದ್ರತೆ ಉಸ್ತುವಾರಿ ವಹಿಸಿದರು. ನಂತರ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜಯ್ ಪಾಟೀಲ್ ಅವರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದು ಕೆಲವೊಂದು ಸಲಹೆ-ಸೂಚನೆಗಳನ್ನು ನೀಡಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಗಣ್ಯಾತಿಗಣ್ಯರು, ಧಾರ್ಮಿಕ ಮುಖಂಡರು ಮತ್ತು ಆಧ್ಯಾತ್ಮಿಕ ಧುರೀಣರು ಧರ್ಮ ಸಂಸದ್ ಸಭೆಯಲ್ಲಿ ಭಾಗವಹಿಸಿರುವುದರಿಂದ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin