ಸೆಲ್ಫಿ ತೆಗೆಯಲು ಹೋದವನ ಬೆನ್ನು ಮೂಳೆ ಮುರಿದ ಆನೆ

ಈ ಸುದ್ದಿಯನ್ನು ಶೇರ್ ಮಾಡಿ

elep
ಶಿರಾ, ನ.24- ಕಾಡಾನೆಗಳ ಮುಂದೆ ಸೆಲ್ಫಿ ತೆಗೆಯಲು ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಆನೆಯೊಂದು ದಾಳಿ ಮಾಡಿರುವ ಘಟನೆ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಭೀಮಣ್ಣ (40) ಆನೆ ದಾಳಿಗೆ ಒಳಗಾದ ವ್ಯಕ್ತಿ. ನಿನ್ನೆಯಷ್ಟೆ ಶಿರಾ ನಗರದ ಓಜಗುಂಟೆ ಬಳಿ ಕಾಣಿಸಿಕೊಂಡ ಎರಡು ಕಾಡಾನೆಗಳು ನಗರ ಸೇರಿದಂತೆ ಹಲವಾರು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದ್ದವು. ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಹಿಮ್ಮೆಟ್ಟಿಸಲು  ಹರಸಾಹಸ ಪಟ್ಟರು ಸ್ಥಳ ಬಿಟ್ಟು ಕದಲಿರಲಿಲ್ಲ. ರಾತ್ರಿ ಕಾರ್ಯಾಚರಣೆ ಸ್ಥಗಿತಗೊಂಡ ಕಾರಣ ಪೂಜಾರ ಮುದ್ದನಹಳ್ಳಿ ಹತ್ತಿರ ಪ್ರತ್ಯಕ್ಷವಾಗಿವೆ. ಮತ್ತೆ ಅರಣ್ಯಧಿಕಾರಿಗಳು ಪಟಾಕಿ ಸಿಡಿಸಿದ ಕಾರಣ ಆನೆಗಳು ಅಗ್ರಹಾರ ಕೆರೆಯ ಮೂಲಕ ಹಾಯುತ್ತಿರುವಾಗ ಭೀಮಣ್ಣ ತನ್ನ ಮೊಬೈಲ್‍ನಲ್ಲಿ ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಮೊದಲೇ ಗಾಸಿಗೊಂಡಿದ್ದ ಕಾಡಾನೆ ರೊಚ್ಚಿಗೆದ್ದು ದಾಳಿ ಮಾಡಿದ ಪರಿಣಾಮ ಆತನ ಬಲ ಭುಜ, ಕೈಮೂಳೆ ಮುರಿದು ತೀವ್ರತರ ಪಟ್ಟಾದ ಕಾರಣ ಭೀಮಣ್ಣ ನನ್ನು ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಧಾಖಲಿಸಲಾಗಿದೆ ಎನ್ನಲಾಗಿದೆ.

ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸಾರ್ವಜನಿಕರು ಕಾಡಾನೆಗಳ ದಾಳಿಗೆ ತುತ್ತಾದಾರೂ ಎಂಬ ಬಗ್ಗೆ ಜನರನ್ನು ಎಷ್ಠೇ ಚದುರಿಸಿದರು ಸಹ ಜನರ ಸೆಲ್ಫಿ ಹುಚ್ಚಿನಿಂದಾಗಿ ಆನೆಗಳು ಕೆರಳುವ ಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹ್ನದ ಸಮಯಕ್ಕೆ ರಾಜ್ಯದ ಹಾರೋಗೆರೆ ಕಡೇಯಿಂದ ಆಂಧ್ರ ಪ್ರದೇಶದ ಇಟ್ಟಗೆಹಳ್ಳಿ ಗುಟ್ಟೆಯ ಮೂಲಕ ಆನೆಗಳು ಅನ್ಯ ರಾಜ್ಯ ಸೇರಿದನ್ನು ನೋಡಿ ಜನ ನಿಟ್ಟುಸಿರು ಬಿಟ್ಟರು. ಶಿರಾ ಗ್ರಾಮಾಂತರ ಸಿಪಿಐ ಸುದರ್ಶನ್, ಪಿಎಸ್‍ಐ ಬಿ.ಕೆ.ಚಂದ್ರಶೇಖರ್ ಹಾಗೂ ಅರಣ್ಯಧಿಕಾರಿ ಸುರೇಶ್ ಸೇರಿದಂತೆ ಅರಣ್ಯ ಮತ್ತು ಪೊಲೀಸ್ ಸಿಬ್ಬಂದ್ದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Facebook Comments