ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-11-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅನೇಕರೊಡನೆ ವಿರೋಧ ಸಲ್ಲದು. ಮಹಾಜನರನ್ನು ಗೆಲ್ಲುವುದು ಕಷ್ಟ. ಕೆರಳಿ ಏಳುವ ಸರ್ಪವನ್ನೂ ಒಟ್ಟಾದ ಇರುವೆಗಳು ತಿಂದುಹಾಕುತ್ತವೆ. -ಪಂಚತಂತ್ರ, ಕಾಕೋಲೂಕೀಯ

Rashi

ಪಂಚಾಂಗ : ಶನಿವಾರ 25.11.2017

ಉದಯ ಬೆ.06.23 / ಸೂರ್ಯ ಅಸ್ತ ಸಂ.05.50
ಚಂದ್ರ ಉದಯ ಬೆ.11.34 / ಚಂದ್ರ ಅಸ್ತ ರಾ.11.28
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠೀ (ಬೆ.07.58) / ನಕ್ಷತ್ರ: ಶ್ರವಣ (ಮ.12.49)
ಯೋಗ: ಧ್ರುವ (ರಾ.02.38) ಕರಣ: ತೈತಿಲ-ಗರಜೆ (ಬೆ.07.58-ರಾ.08.59)
ಮಳೆ ನಕ್ಷತ್ರ: ಅನೂರಾಧ ಮಾಸ: ವೃಶ್ಚಿಕ ತೇದಿ: 10

ಇಂದಿನ ವಿಶೇಷ: ಮಿತ್ರ ಸಪ್ತಮಿ

ರಾಶಿ ಭವಿಷ್ಯ :

ಮೇಷ : ಎಲ್ಲರಿಗೂ ಇಷ್ಟವಾದ ಕೆಲಸಗಳನ್ನು ಮಾಡುವಿರಿ, ಒಳ್ಳೆಯ ಹೃದಯವಂತರಾಗುವಿರಿ
ವೃಷಭ : ನಿಮ್ಮ ನೈಪುಣ್ಯದಿಂದ ಸುಖ ಪಡೆಯು ವಿರಿ, ಇತರರ ಬಗ್ಗೆ ಹೆಚ್ಚು ಜಾಗ್ರತೆಯಿರಲಿ
ಮಿಥುನ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ
ಕಟಕ : ಅನೇಕ ಸುಂದರ ವಸ್ತುಗಳನ್ನು ಮನೆಗೆ ತರುವ ಪ್ರಯತ್ನ ಮಾಡುವಿರಿ
ಸಿಂಹ: ಕುಟುಂಬ ಹಾಗೂ ಪರಿವಾರದೊಂದಿಗೆ ಸರಿಯಾಗಿ ಹೊಂದಿಕೊಳ್ಳಿ
ಕನ್ಯಾ: ನಿಮಗೆ ಹಿತವಚನ ಹೇಳುವವರ ಬಗ್ಗೆ ಮೊದಲು ತಿಳಿಯಿರಿ, ಜಾಗ್ರತೆಯಿಂದಿರಿ
ತುಲಾ: ವಿಶೇಷವಾದ ಕೀರ್ತಿ ಪಡೆಯುವಿರಿ, ಕಲೆಗಳನ್ನು ಪೆÇ್ರೀತ್ಸಾಹ ಮಾಡುವಿರಿ
ವೃಶ್ಚಿಕ: ಮಕ್ಕಳಿಂದ ಹೆಚ್ಚು ಸಂತೋಷ ಪಡೆಯುವಿರಿ
ಧನುಸ್ಸು: ಮನೆಗೆ ಬಂಧು-ಮಿತ್ರರ ಆಗಮನ
ಮಕರ: ಹಿರಿಯರಿಗೆ ಪ್ರೀತಿ-ವಿಶ್ವಾಸ ತೋರಿಸುವಿರಿ
ಕುಂಭ: ಕೆಲಸಗಾರರೊಂದಿಗೆ ವಿನಾಕಾರಣ ಶತ್ರುತ್ವ ಬೆಳೆಯುವುದು, ಆರೋಗ್ಯ ಕ್ಷೀಣವಾಗಿರುತ್ತದೆ
ಮೀನ: ಹಿತ ಶತ್ರುಗಳಿಂದ ತೊಂದರೆ ಇರುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin