ಕನ್ನಡಕ್ಕೆ ಅವಿರತ ಕೊಡುಗೆ ಕೊಟ್ಟ ಮೈಸೂರು ರಾಜ ವಂಶಸ್ಥರನ್ನೇ ಮರೆತ ಜಿಲ್ಲಾಡಳಿತ..!

ಈ ಸುದ್ದಿಯನ್ನು ಶೇರ್ ಮಾಡಿ

my-d-1

ಮೈಸೂರು,ನ.25- ಕರ್ನಾಟಕಕ್ಕೆ ಹಾಗೂ ಕನ್ನಡ ಭಾಷೆಗೆ ಮೈಸೂರನ್ನಾಳಿದ ಒಡೆಯರ ವಂಶಸ್ಥರು ಅತಿ ಹೆಚ್ಚು ಕೊಡುಗೆ ನೀಡಿದ್ದಾರೆ. ಇದೀಗ ನಗರದ ಮಹಾ ರಾಜ ಕಾಲೇಜು ಆವರಣದಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
ಆದರೆ ಇಂತಹ ಪ್ರಮುಖ ಸಮ್ಮೇಳನಕ್ಕೆ ಒಡೆಯರ ವಂಶಸ್ಥರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೃಷ್ಣರಾಜ ಒಡೆಯರ್, ಶ್ರೀ ಜಯಚಾಮರಾಜ ಒಡೆಯರ್ ಹೀಗೆ ಹಲವಾರು ರಾಜರು ಕನ್ನಡ ನಾಡು-ನುಡಿಗೆ ಅಪಾರ ಒತ್ತು ಕೊಟ್ಟಿದ್ದರು. ಹಲವಾರು ಕೊಡುಗೆಗಳನ್ನು ನೀಡಿದ್ದಾರೆ.

ಕನ್ನಡ ಮಾತೆ ಭುವನೇಶ್ವರಿ ದೇವಿಯ ಮಂದಿರವನ್ನು ಅರಮನೆ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಎಷ್ಟೊಂದು ಕೊಡುಗೆ ನೀಡಿರುವ ಒಡೆಯರ ವಂಶಸ್ಥರನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ನೀಡದೆ ಅವಮಾನ ಮಾಡಲಾಗಿದೆ ಎಂದು ಒಡೆಯರ ವಂಶಸ್ಥರ ಅಭಿಮಾನಿಗಳು ಸಮ್ಮೇಳನದ ವೇಳೆ ತೀವ್ರವಾಗಿ ಖಂಡಿಸಿದ್ದಾರೆ. ಇದು ಮೈಸೂರು ಜಿಲ್ಲಾಡಳಿತ ಮಾಡಿರುವ ಎಡವಟ್ಟು . ಒಡೆಯರ ವಂಶಸ್ಥರಿಗೆ ಹಾಗೂ ಕನ್ನಡ ಭಾಷೆಗೆ ಜಿಲ್ಲಾಡಳಿತ ಅವಮಾನ ಮಾಡಿದೆ ಎಂದು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin