ರಾಮಮಂದಿರದ ಬಗೆಗಿನ ಪ್ರೊ.ಕೆ.ಎಸ್.ಭಗವಾನ್ ಹೇಳಿಕೆ ವಿರುದ್ಧ ಹರಿಹಾಯ್ದ ಮಹಿಳೆ, ಗದ್ದಲ ಕೋಲಾಹಲವಾದ ಗೋಷ್ಠಿ

ಈ ಸುದ್ದಿಯನ್ನು ಶೇರ್ ಮಾಡಿ

skb

ಮೈಸೂರು,ನ.25- ಇಲ್ಲಿನ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ನಡೆಯುತ್ತಿ ರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಅಲಕ್ಷಿತ ಜನ ಸಮುದಾಯ ಎಂಬ ವಿಷಯದ ಮೇಲಿನ ಸಂವಾದದ ಸಂದರ್ಭ ಪ್ರೊ.ಕೆ.ಎಸ್.ಭಗವಾನ್ ಅವರು ರಾಮಮಂದಿರ ನಿರ್ಮಾಣದ ಕುರಿತಂತೆ ಪ್ರಸ್ತಾಪಿಸಿದಾಗ ಕೆಲವರು ಗದ್ದಲ ಎಬ್ಬಿಸಿದ ಘಟನೆ ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಭಗವಾನ್ ಅವರು ಎದ್ದು ಮಾತನಾಡಲು ಆರಂಭಿಸುತ್ತಿದ್ದಂತೆ ಮಹಿಳೆಯೊಬ್ಬಳು ಅವರ ವಿರುದ್ಧ ಹರಿಹಾಯ್ದಳು.

ಪ್ರೊ.ಭಗವಾನ್ ಅವರು ರಾಮಮಂದಿರ ನಿರ್ಮಾಣದ ಬಗ್ಗೆ ಅಪಸ್ವರ ಎತ್ತಿದ್ದು , ಈ ಗದ್ದಲಕ್ಕೆ ಕಾರಣವಾಯಿತು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಭಗವಾನ್ ಅವರು ಮನುಸ್ಮೃತಿಯಲ್ಲಿ ಶೂದ್ರರನ್ನು ಗುಲಾಮರೆಂದು ಪರಿಗಣಿಸಲಾಗಿದೆ. ಮನುಸ್ಮೃತಿ ಆರಾಧಕರು ರಾಮಮಂದಿರ ಕಟ್ಟಲು ಹೊರಟಿದ್ದಾರೆ. ಅವರನ್ನು ಬೆಂಬಲಿಸುವುದು ತಪ್ಪು . ಅವರಿಗೆ ಬೆಂಬಲ ನೀಡಿದರೆ ನಾವು ಗುಲಾಮರಾಗ ಬೇಕಾಗುತ್ತದೆ ಎಂದು ಹೇಳಿದರು. ಆಗ ಆ ಮಹಿಳೆ ವಿರೋಧ ವ್ಯಕ್ತಪಡಿಸಿದಳು. ಇಲ್ಲಿ ರಾಮಮಂದಿರ ಪ್ರಸ್ತಾಪ ಅಗತ್ಯವಿಲ್ಲ. ಇದು ಸಾಹಿತ್ಯ ಸಮ್ಮೇಳನ. ಸಾಹಿತ್ಯದ ಬಗ್ಗೆ ಅಷ್ಟೇ ಮಾತನಾಡಬೇಕು ಎಂದು ಮಹಿಳೆ ಭಗವಾನ್ ಅವರಿಗೆ ಉಪದೇಶ ಮಾಡಲಾರಂಭಿಸಿದಳು. ಆಗ ಭಗವಾನ್ ಅವರು ಗಲಾಟೆ ಮಾಡುತ್ತಿದ್ದ ಮಹಿಳೆ ಯನ್ನು ಹೊರಗೆ ಕಳುಹಿಸುವಂತೆ ತಿಳಿಸಿದರು. ಇದೇ ವೇಳೆ ಗೋಷ್ಠಿಯಲ್ಲಿ ಭಾಗವಹಿಸಿದ್ದ ಹಲವರು ಮಹಿಳೆ ವಿರುದ್ಧ ಗಲಾಟೆ ಆರಂಭಿಸಿ ದರು. ಹೀಗಾಗಿ ಗೋಷ್ಠಿಯಲ್ಲಿ ಗದ್ದಲ ಉಂಟಾ ಯಿತು. ಇಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೆ ಇದನ್ನು ವಿಫಲ ಗೊಳಿಸುವ ಉದ್ದೇಶದಿಂದಲೇ ಉಡುಪಿಯಲ್ಲಿ ಧರ್ಮ ಸಂಸದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆಕ್ಷೇಪಿಸಿದರು.

ಮಾಧ್ಯಮಗಳು ಕೂಡ ಸಾಹಿತ್ಯ ಸಮ್ಮೇಳನದ ವಿಷಯವನ್ನು ಕಡೆಗಣಿಸಿ ಧರ್ಮ ಸಂಸದ್‍ಗೆ ಹೆಚ್ಚು ಒತ್ತು ಕೊಟ್ಟಿದ್ದು ವಿಪರ್ಯಾಸ ಎಂದು ಭಗವಾನ್ ಹೇಳಿದರು. ಎಲ್ಲ ಧರ್ಮಗಳ ಜವಾಬ್ದಾರಿ ಜನರನ್ನು ರಕ್ಷಿಸುವುದು. ಆದರೆ ಈಗ ಯಾವ ಧರ್ಮಗಳು ಜನರ ರಕ್ಷಣೆ ಮುಂದಾಗುತ್ತಿಲ್ಲ. ಅಂಥ ಧರ್ಮಗಳು ನಮಗೆ ಬೇಡ ಎಂದು ಭಗವಾನ್ ಹೇಳಿದರು.

Facebook Comments

Sri Raghav

Admin