ಚೆಂಡು ವಿರೂಪಗೊಳಿಸಿದ ಲಂಕಾ ವೇಗಿ ದಶುನ್ ಸನಖಗೆ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

Cricket--02

ನಾಗಪುರ, ನ.26- ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ನ ದ್ವಿತೀಯ ದಿನದಲ್ಲಿ ಚೆಂಡು ವಿರೂಪಗೊಳಿಸಿದ ಶ್ರೀಲಂಕಾದ ಮಧ್ಯಮ ವೇಗಿ ದಶುನ್ ಸನಖಗೆ ದಂಡ ವಿಧಿಸಲಾಗಿದೆ. ಐಸಿಸಿ ಪ್ರಕಾರ ಚೆಂಡನ್ನು ವಿರೂಪ ಗೊಳಿಸಿದರೆ 2.2.29 ನಿಯಮದಡಿ ಆ ಆಟಗಾರ ದಂಡನೆಗೆ ಒಳಗಾಗುತ್ತಾನೆ.
ನಿನ್ನೆ ಪಂದ್ಯ ನಡೆಯುವ ವೇಳೆ 50ನೇ ಓವರ್ ಮಾಡಲು ಬಂದ ಸನಖ ಚೆಂಡನ್ನು ವಿರೂಪಗೊಳಿಸಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿದ್ದರಿಂದ ಅಂಪೈಗಳಾದ ಜೋಲ್ ವಿಲ್ಸನ್ , ರಿಚರ್ಡ್ ಕೆಟ್ಲೆಬೋರೊಹ್, ನಿಗಿಲ್ ಲಿಲಾಂಗ್ ಹಾಗೂ ಶ್ಯಾಮ್‍ಸುದ್ದೀನ್ ಹಾಗೂ ಮ್ಯಾಚ್ ರೆಫರ್ರಿ ಡೇವಿಡ್ ಬೂನ್ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಇದರ ಪ್ರಕಾರ ಸನಖ ಎರಡನೇ ಪಂದ್ಯದಿಂದ ಪಡೆಯುವ ಸಂಭಾವನೆಯಲ್ಲಿ 75% ದಂಡ ರೂಪವಾಗಿ ತೆರಬೇಕಾಗಿದೆ , ಇದೇ ರೀತಿಯ ಪ್ರಕರಣದಲ್ಲಿ ಸನಖ ಎರಡು ಬಾರಿ ಸಿಲುಕಿಕೊಂಡರೆ ಆ ಪಂದ್ಯದಿಂದ ನಿಷೇಧಕ್ಕೊಳಗಾಗಬೇಕಾಗುತ್ತದೆ.

Facebook Comments

Sri Raghav

Admin