‘ಹಿಂದುಗಳೇ ಮನೆಯಲ್ಲಿ ಮೊಬೈಲ್ ಇರುವಂತೆ ಆಯುಧಗಳನ್ನೂ ಇಟ್ಟುಕೊಳ್ಳಿ’

ಈ ಸುದ್ದಿಯನ್ನು ಶೇರ್ ಮಾಡಿ

Swamy--02

ಉಡುಪಿ, ನ.26- ಧರ್ಮ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕೆಂದು ಆಚಾರ್ಯ ನರೇಂದ್ರಗಿರಿ ಮಹಾರಾಜ್ ಕರೆ ನೀಡಿದ್ದಾರೆ.  ಹಿಂದೂ ಸಾಧುಸಂತರ 12ನೇ ಧರ್ಮ ಸಂಸತ್‍ನಲ್ಲಿ ಮಾತನಾಡಿದ ಅವರು, ದೇಶದ್ರೋಹಿ ಮತ್ತು ಸಮಾಜಘಾತುಕರಿಂದ ಅಪಾಯವಿದ್ದು, ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರೂ ಆಯುಧ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.  ಮನೆಯಲ್ಲಿ ಮೊಬೈಲ್ ಇರುವಂತೆ ಆಯುಧಗಳು ಕೂಡ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಜನಸಂಖ್ಯೆಯ ನಿಯಂತ್ರಣಕ್ಕೆ ಚೀನಾದಲ್ಲಿರುವಂತೆ ಕಠಿಣ ಕಾನೂನಿನ ಅಗತ್ಯವಿದೆ. ಹಿಂದುಗಳಂತೆ ಅಲ್ಪಸಂಖ್ಯಾತರು ಜನಸಂಖ್ಯಾ ನಿಯಂತ್ರಣ ಅನುಸರಿಸುವಂತೆ ಕಠಿಣ ಕಾನೂನು ತರಬೇಕಾದ ಅಗತ್ಯವಿದೆ ಎಂದರು.

Facebook Comments

Sri Raghav

Admin