ಆಧಾರ್ ಸಂಪರ್ಕ ಕಡ್ಡಾಯ ಕುರಿತ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Aadhar

ನವದೆಹಲಿ, ನ.27-ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಮಂಜೂರು ಮಾಡಲು ಆಧಾರ್ ಸಂಪರ್ಕ ಕಡ್ಡಾಯ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸಮ್ಮತಿ ನೀಡಿರುವ ಸುಪ್ರೀಂಕೋರ್ಟ್, ಈ ಸಂಬಂಧ ದೆಹಲಿ ಮತ್ತು ಕೇಂದ್ರ ಸರ್ಕಾರದ ನಡುವಣ ವಿವಾದದ ವಿಚಾರಣೆ ಪೂರ್ಣಗೊಂಡ ನಂತರ ತನ್ನ ಸಂವಿಧಾನ ಪೀಠ ಈ ಪ್ರಕ್ರಿಯೆ ಆರಂಭಿಸಲಿದೆ ಎಂದು ತಿಳಿಸಿದೆ.

ಈ ಮಧ್ಯೆ ವಿವಿಧ ಯೋಜನೆಗಳಿಗಾಗಿ ಆಧಾರ್‍ಗೆ ಸಂಪರ್ಕ ಕಲ್ಪಿಸಲು ಕಡ್ಡಾಯಗೊಳಿಸುವ ದಿನಾಂಕದ ಗಡುವನ್ನು ಮುಂದಿನ ವರ್ಷ ಮಾರ್ಚ್ 31ಕ್ಕೆ ವಿಸ್ತರಿಸಲು ತಾನು ಸಿದ್ಧವಿರುವುದಾಗಿ ಕೇಂದ್ರ ಸರ್ಕಾರವು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿದೆ. ಈ ವಿಷಯದಲ್ಲಿ ಸಂವಿಧಾನ ಪೀಠ ಮಾತ್ರ ಮಧ್ಯಂತರ ಆದೇಶ ನೀಡಲು ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನೂ ಒಳಗೊಂಡ ಪೀಠವು ಸ್ಪಷ್ಟಪಡಿಸಿದೆ.

Facebook Comments

Sri Raghav

Admin