ಈ ಕಾರಣಗಳಿಗೆ ದ್ರಾಕ್ಷಿ ಸೇವನೆ ಅತ್ಯವಶ್ಯಕ

ಈ ಸುದ್ದಿಯನ್ನು ಶೇರ್ ಮಾಡಿ

grape-1

ಉತ್ತಮ ಆರೋಗ್ಯಕ್ಕೆ ದ್ರಾಕ್ಷಿ ಸೇವನೆ ಅತ್ಯವಶ್ಯಕ, ಹುಳಿ ಮತ್ತು ಸಿಹಿ ದ್ರಾಕ್ಷಿಯನ್ನು ಸವಿದಿರುತ್ತೇವೆ. ಆದರೆ ದ್ರಾಕ್ಷಿ ಎಂದ ಕೂಡಲೆ ನಮಗೆ ಹುಳಿಯ ನೆನಪಾಗಿ ಬಾಯಲ್ಲಿ ನೀರುರುವುದೇ ಇರದು.. ಇದೇ ದ್ರಾಕ್ಷಿಯ ಮೂಲ ಗುಣ ಎನ್ನಬಹುದು. ಪ್ರತಿ ದಿನ ಕನಿಷ್ಠ 5 ದ್ರಾಕ್ಷಿಗಳನ್ನು ಸೇವಿಸಿದರೆ ಅಂತಹವರು ಸಾಕಷ್ಟು ರೋಗಗಳಿಂದ ದೂರವಿರಬಹುದು. ಇಂತಹ ಹಲವು  ಪ್ರಯೋಜನಗಳ ವಿವರ ಇಲ್ಲಿದೆ.

grap-3

ಒಣದ್ರಾಕ್ಷಿ : ಒಣದ್ರಾಕ್ಷಿಯ ಸೇವನೆಯಿಂದಾಗುವ ಲಾಭಗಳು : ದೇಹದಲ್ಲಿನ ರಕ್ತ ಶುದ್ದಿಕರಿಸಲು ಮತ್ತು ತ್ವಚೆಯನ್ನು ಅರೋಗ್ಯದಿಂದಿಡಲು ಸಹಕಾರಿಯಾಗಲಿದೆ. ಮುಖದಲ್ಲಿನ ಸುಕ್ಕು ಮತ್ತು ಗೆರೆಗಳು ಕಡಿಮೆಯಾಗಿ ಮತ್ತಷ್ಟು ಪ್ರಾಯದಾಯಕವಾಗಿ ಕಾಣಬಹುದು. ಆ್ಯಂಟಿಬ್ಯಾಕ್ಟೀರಿಯಾ ಮತ್ತು ಆ್ಯಂಟಿಫಂಗಲ್‌ ಪ್ರಾಪರ್ಟಿ ಇರುವುದರಿಂದ ರಾಶಸ್‌, ತುರಿಕೆ ಮತ್ತು ಸ್ಕಿನ್‌ಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ.

ದ್ರಾಕ್ಷಿಯಿಂದ ತಯಾರಿಸಿದ ವೈನ್ ಮತ್ತು ಇದರ ಬೀಜಗಳಿಂದಾಗುವ ಅನುಕೂಲಗಳು : ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ, ಜೀವಕೋಶಗಳಿಗೆ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಣೆ ನೀಡುತ್ತದೆ.

grepe-2

ಎಚ್ಚರಿಕೆ : ಅತಿಯಾದ ರಕ್ತದೊತ್ತಡ, ಕ್ಯಾನ್ಸರ್ ಮತ್ತು ರಕ್ತಸ್ರಾವದ ನ್ಯೂನತೆಯಿಂದ ಬಳಲುವವರು ಅಥವಾ ರಕ್ತಹೀನತೆಯಿಂದ ಬಳಲುವವರು ಇದರಿಂದ ದೂರ ಇರಬೇಕು. ಇನ್ನು ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರು ಕೂಡ ಇದನ್ನು ತೆಗೆದುಕೊಳ್ಳಬಾರದು. ಇದನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಂಡು ಉಪಯೋಗಿಸಬೇಕು.

ಕಪ್ಪು ದ್ರಾಕ್ಷಿ: ಒಂದು ಬಟ್ಟಲು ಕಪ್ಪು ದ್ರಾಕ್ಷಿ ರಸದೊಂದಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನವೂ ಕುಡಿಯುತ್ತಿದ್ದರೆ ರಕ್ತವೃದ್ಧಿಯಾಗುವುದು. ಅಜೀರ್ಣದ ಸಮಯದಲ್ಲಿ ಬಾಯಿ ವಾಸನೆ ಬರುತ್ತಿದ್ದರೆ ನಿಯಮಿತ ಪ್ರಮಾಣದಲ್ಲಿ ದ್ರಾಕ್ಷಿಯನ್ನು ಸೇವಿಸಿದರೆ ಬಾಯಿ ಶುದ್ಧವಾಗುತ್ತದೆ.  ರಕ್ತವನ್ನು ಹೆಚ್ಚಿಸುವ ಸುಲಭ ಉಪಾಯವೇನೆಂದರೆ 1 ಲೋಟ ಕರಿದ್ರಾಕ್ಷಿಯ ರಸದಲ್ಲಿ 1 ಚಮಚ ಜೇನುತುಪ್ಪ ಸೇರಿಸಿ ನಿಯಮಿತವಾಗಿ ಸೇವಿಸಬೇಕು. ಕಪ್ಪು ದ್ರಾಕ್ಷಿಯಲ್ಲಿರುವ ವಿಟಮಿನ್, ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ ಮತ್ತು ಸೆಲೆನಿಯಂ ಅಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸಿ ರಕ್ತಕ್ಕೆ ಕಬ್ಬಿಣಾಂಶ ನೀಡಿ ದೇಹಕ್ಕೆ ಯಾವುದೇ ಸೋಂಕು ತಗುಲದಂತೆ ತಡೆಯುತ್ತದೆ.

ಬಿಳಿ ದ್ರಾಕ್ಷಿ ; ಬಿಳಿ  ದ್ರಾಕ್ಷಿ  ಹಣ್ಣು  ದೇಹಕ್ಕೆ  ತಂಪು. ಇದನ್ನು  ನಿತ್ಯವೂ  ಸೇವಿಸಿದರೆ   ಹೊಟ್ಟೆ ಉರಿ, ಕಣ್ಣು ಉರಿ  ಕಡಿಮೆ  ಆಗುತ್ತದೆ. ಹುಳಿ  ದ್ರಾಕ್ಷಿ  ಹಣ್ಣನ್ನು  ಸೇವಿಸಿದರೆ  ಅಜೀರ್ಣ ಗುಣವಾಗುತ್ತದೆ. ಅಜೀರ್ಣದ ಸಮಯದಲ್ಲಿ ಬರುವ ಬಾಯಿ ವಾಸನೆಯನ್ನು ಬರುತ್ತಿದ್ದರೆ ಶಮನ ಮಾಡಲಿದೆ. ಬಿಳಿ  ದ್ರಾಕ್ಷಿ ಹಣ್ಣನ್ನು  ಕ್ರಮವಾಗಿ ಬಳಸುತ್ತಿದ್ದರೆ ಹೊಟ್ಟೆ ಹುಣ್ಣು, ಕ್ಷಯ, ಸಂಧಿವಾತ, ಹೆರಿಗೆ ಮುಂಚಿನ ಮತ್ತು ನಂತರ ಉಂಟಾಗಬಹುದಾದ ರಕ್ತಹೀನತೆ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

Facebook Comments