ಎಸ್‍ಸಿಒ ಶೃಂಗಸಭೆಯಲ್ಲಿ ಭಾರತ-ಪಾಕ್ ಮುಖಾಮುಖಿ

ಈ ಸುದ್ದಿಯನ್ನು ಶೇರ್ ಮಾಡಿ

india--pakistan

ನವದೆಹಲಿ, ನ.27 – ಭಾರತ ಮತ್ತು ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯ ಮತ್ತಷ್ಟು ಬಿಗಡಾಯಿಸಿರುವ ನಡುವೆಯೇ ಉಭಯ ದೇಶಗಳು ಮುಂದಿನ ವಾರ ರಷ್ಯಾದ ಸೋಚಿಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ(ಎಸ್‍ಸಿಒ) ಶೃಂಗಸಭೆಯಲ್ಲಿ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆ ಇದೆ.
-ನಿಷೇಧಿತ ಜಮಾತ್-ಉದ್-ದವಾ(ಜೆಯುಡಿ) ಹಾಗೂ 2008ರ ಮುಂಬೈ ಭಯೋತ್ಪಾದನೆ ದಾಳಿಯ ಸೂತ್ರಧಾರ ಹಫೀಜ್ ಸಯೀದ್‍ನನ್ನು ಪಾಕಿಸ್ತಾನವು ಬಂಧಮುಕ್ತಗೊಳಿಸಿರುವ ಸಂದರ್ಭದಲ್ಲೇ ನಡೆಯುತ್ತಿರುವ ಈ ಸಭೆಯಲ್ಲಿ ಇಸ್ಲಾಮಾಬಾದ್‍ಗೆ ಮುಖಭಂಗವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸೀಫ್ ಇಸ್ಲಾಮಾಬಾದ್‍ನನ್ನು ಪ್ರತಿನಿಧಿಸಲಿದ್ದಾರೆ. ಚೀನಾ ಪ್ರಧಾನಮಂತ್ರಿ ಲೀ ಕೆಕ್ವಿಯಾಂಗ್ ಮತ್ತು ರಷ್ಯಾದ ಉನ್ನತ ಅಧಿಪತಿಗಳು ಭಾಗವಹಿಸುವರು.

Facebook Comments

Sri Raghav

Admin