‘ಕುಣಿಗಲ್ ತಾಲ್ಲೂಕಿನ ಕಲ್ಲು-ಮಣ್ಣಿನ ಮೇಲೆ ಡಿ.ಕೆ.ಬ್ರದರ್ಸ್ ಕಣ್ಣು’

ಈ ಸುದ್ದಿಯನ್ನು ಶೇರ್ ಮಾಡಿ

DK--02

ಕುಣಿಗಲ್,ನ.27- ಡಿ.ಕೆ ಸಹೋದರರು ತಾಲ್ಲೂಕಿನ ಕಲ್ಲು-ಮಣ್ಣಿನ ಮೇಲೆ ಕ್ಷೇತ್ರದ ಮತದಾರರು ಎಚ್ಚರಿಕೆಯಿಂದ ಇರಬೇಕು ಎಂದು ಕಾಂಗ್ರೆಸ್ ಬಂಡಾಯ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಎಚ್ಚರಿಸಿದ್ದಾರೆ. ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಗೈರು ಹಾಜರಾಗಿದ್ದು, ಕಾರ್ಯಕ್ರಮದ ನಂತರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಮೂರು ದಶಕಗಳಿಂದ ವಿರೋಧ ಪಕ್ಷದವರ ಕಿರುಕುಳದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ನನಗೆ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಆಹ್ವಾನ ನೀಡಿಲ್ಲ. ಇದೊಂದು ಕನಕಪುರ ಸಹೋದರ ಅವರ ಸಂಬಂಧ ರಂಗನಾಥ್ ಅವರ ಪಿತೂರಿಯಾಗಿದ್ದು, ಬೆಂಗಳೂರಿನ ಅಂಜನನಗರ, ಬ್ಯಾಡರಹಳ್ಳಿ, ರಾಜರಾಜೇಶ್ವರಿನಗರ, ಲಗ್ಗೆರೆ, ಜಿಗಣಿ, ಆನೇಕಲ್‍ಲು ಇಲ್ಲಿಂದ ಗಾರ್ಮೆಂಟ್ಸ್ ನೌಕರರಿಗೆ ಹಣ ನೀಡಿ 60 ಬಸ್‍ಗಳಲ್ಲಿ ಸಮಾವೇಶಕ್ಕೆ ಜನರನ್ನು ಕರೆಸಲಾಗಿದೆ.

ತಾಲ್ಲೂಕು ಕಾಂಗ್ರೆಸ್‍ಗೆ ಅಂತಹ ದುಸ್ಥಿತಿ ಇಲ್ಲ. ಹೊರಗಡೆಯಿಂದ ಜನ ಬಂದಿರುವುದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ಇದನ್ನು ಹೈಕಮಾಂಡ್‍ಗೆ ನೀಡುತ್ತೇನೆ ಎಂದರು.ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‍ನ ಬಿ ಫಾರಂ ನನಗೆ ಖಚಿತ. ತಪ್ಪಿದಲ್ಲಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ತಮ್ಮ ಬೆಂಬಲಿಗರನ್ನು ರಕ್ಷಿಸುತ್ತೇನೆ ಎಂದು ಹೇಳಿದರು.  ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರು ಕುಣಿಗಲ್ ತಾಲ್ಲೂಕಿನಲ್ಲಿರುವ ಬೆಲೆ ಬಾಳುವ ಕಲ್ಲು ಮಣ್ಣುಗಳ ಮೇಲೆ ಕಣ್ಣಿಟ್ಟಿದ್ದು , ಇದರಿಂದ ಸಂಸದರ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದ ಒಬ್ಬ ತಮ್ಮ ಸಂಬಂಧಿ ಕಾರ್ಯಕರ್ತರನ್ನು ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿದ್ದಾರೆ. ಕ್ಷೇತ್ರದ ಜನತೆ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Facebook Comments

Sri Raghav

Admin