ಗುಜರಾತ್ ನಲ್ಲಿ ಮೋದಿ ದಂಡಯಾತ್ರೆ, ಅಬ್ಬರದ ಚುನಾವಣಾ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

Modi--02

ಅಹಮದಾಬಾದ್, ನ.27-ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹೈವೋಲ್ಟೇಜ್ ಗುಜರಾತ್ ವಿಧಾನಸಭಾ ಚುನಾವಣೆ ಕಾವು ಏರತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಚಾರಕ್ಕೆ ಇಂದು ಬಿರುಸಿನ ಚಾಲನೆ ನೀಡಿದ್ದಾರೆ. ಇಂದು ಮತ್ತು ನ.29ರಂದು ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನ ವಿವಿಧೆಡೆ ಎಂಟು ಬೃಹತ್ ರ್ಯಾಲಿಗಳಲ್ಲಿ ಮೋದಿ ಭಾಗವಹಿಸಲಿದ್ದು, ಚುನಾವಣಾ ಪ್ರಚಾರ ರಂಗೇರಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎರಡು ದಿನಗಳ ಗುಜರಾತ್ ಪ್ರವಾಸದ ಬೆನ್ನಲ್ಲೆ ಮೋದಿ ಇಂದಿನಿಂದ ಚುನಾವಣಾ ಪ್ರಚಾರ ಆರಂಭಿಸುವುದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ನೇರ ಹಣಾಹಣಿಗೆ ಅಖಾಡ ಸಜ್ಜುಗೊಂಡಂತಾಗಿದೆ.

MD 02

ಇಂದು ಭುಜ್‍ನಲ್ಲಿ ಬೃಹತ್ ರ್ಯಾಲಿ ಮೂಲಕ ದಕ್ಷಿಣ ಗುಜರಾತ್‍ನಲ್ಲಿ ಡಿಸೆಂಬರ್ 9ರಂದು ನಡೆಯುವ ಮೊದಲ ಹಂತದ ಚುನಾವಣಾ ಪ್ರಸಾರಕ್ಕೆ ಚಾಲನೆ ನೀಡಿದರು. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಕೇಂದ್ರ ಸರ್ಕಾರದ ಮೂರು ವರ್ಷಗಳ ಸಾಧನೆಗಳು ಮತ್ತು ವಿನೂತನ ಯೋಜನೆಗಳು-ಕಾರ್ಯಕ್ರಮಗಳ ಬಗ್ಗೆ ವಿವರಿಸಿದ ಮೋದಿ, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.  ತಮ್ಮನ್ನು ಮತ್ತು ತಮ್ಮ ಸರ್ಕಾರವನ್ನು ಟೀಕಿಸುತ್ತಿರುವ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ ಅವರು, ಕೇಂದ್ರದ ಸಾಧನೆ ಏನೆಂಬುದು ಜನರಿಗೆ ತಿಳಿದಿದೆ. ಈ ಚುನಾವಣೆಯಲ್ಲಿ ಮತದಾರರೇ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

MD 01

ಬಳಿಕ ರಾಜ್‍ಕೋಟ್‍ನ ಜಸ್‍ಧನ್, ಅಮ್ರೇಲಿಯ ಧಾರಿ ಹಾಗೂ ಸೂರತ್ ಜಿಲ್ಲೆಯ ಕಾಮ್ರೇಜ್ ನಗರಗಳಲ್ಲೂ ಇದೇ ದಿನ ಅವರು ಮೂರು ರ್ಯಾಲಿಗಳಲ್ಲಿ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪರ ಮತ ನೀಡುವಂತೆ ಜನತೆಯಲ್ಲಿ ಮನವಿ ಮಾಡಿದರು.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜ್‍ನಾಥ್ ಸಿಂಗ್, ನೀತಿನ್ ಗಡ್ಕರಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಗುಜರಾತ್ ಮುಖ್ಯಮಂತ್ರಿ ವಿಜಯ್‍ಭಾಯ್ ರೂಪಾನಿ, ಉತ್ತರಪ್ರದೇಶ ಮತ್ತು ರಾಜಸ್ತಾನ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಮತ್ತು ವಸುಂಧರಾ ರಾಜೇ, ರಾಜ್ಯ ಬಿಜೆಪಿ ಅಧ್ಯಕ್ಷ ಭೂಪಿಂದರ್ ಯಾದವ್, ಹಾಗೂ ರಾಜ್ಯ ಮಂತ್ರಿಮಂಡಲದ ಮಂತ್ರಿಗಳೂ ಸೇರಿದಂತೆ ಅನೇಕ ಮುಖಂಡರು ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು.

MD  03

ಮೋದಿ ರ್ಯಾಲಿ ಹಿನ್ನೆಲೆಯಲ್ಲಿ ದಕ್ಷಿಣ ಗುಜರಾತ್ ಇಂದು ಕೇಸರಿ ಮಯವಾಗಿತ್ತು. ಎಲ್ಲೆಡೆ ಬಿಜೆಪಿ ಧ್ವಜಗಳು ಮತ್ತು ಮೋದಿ ಬ್ಯಾನರ್‍ಗಳು ರಾರಾಜಿಸುತ್ತಿದ್ದವು. ಪ್ರಧಾನಿ ಚುನಾವಣಾ ಪ್ರಸಾರದ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ನ.29ರಂದು 4 ರ್ಯಾಲಿಗಳು : ನ.29 ಮಂಗಳವಾರವೂ ದಕ್ಷಿಣ ಗುಜರಾತ್‍ನಲ್ಲಿ ಮೋದಿ ನಾಲ್ಕು ಬೃಹತ್ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೋಮ್‍ನಾಥ್ ಜಿಲ್ಲೆಯ ಬಳಿ ಇರುವ ಮೋರ್ಬಿ ಮತ್ತು ಪ್ರಾಚೀ ಗ್ರಾಮಗಳು, ಭಾವ್‍ನಗರ ಜಿಲ್ಲೆಯ ಪಲಿಟಾನಾ ಮತ್ತು ನವ್‍ಸಾರಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗವಹಿಸುವರು.

Modi--02

ಇದರಿಂದ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜನರು ಭಾಗವಹಿಸಲು ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಚುನಾವಣಾ ರ್ಯಾಲಿಗಳನ್ನು ಸಂಘಟಿಸಲಾಗಿದೆ ಎಂದು ಭೂಪಿಂದರ್ ಯಾದವ್ ತಿಳಿಸಿದ್ದಾರೆ. ಗುಜರಾತ್‍ನಲ್ಲಿ ಡಿ.9 ಮತ್ತು 14ರಂದು ಎರಡು ಹಂತಗಳಲ್ಲಿ ಚುನಾವಣೆಗಳು ನಡೆಯಲಿದ್ದು, ನ.18ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಈಗಾಗಲೇ ಎರಡು ಚುನಾವಣಾಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

Facebook Comments

Sri Raghav

Admin