ಟೆಸ್ಟ್ ನಲ್ಲಿ ವೇಗದ 300 ವಿಕೆಟ್ ಕಬಳಿಸಿದ ರವಿಚಂದ್ರನ್ ಅಶ್ವಿನ್

ಈ ಸುದ್ದಿಯನ್ನು ಶೇರ್ ಮಾಡಿ

Ashwin--02

ನಾಗಪುರ, ನ. 27- ವೇಗದ 200 ವಿಕೆಟ್ ಕಬಳಿಸುವಲ್ಲಿ ಮೊದಲಿಗನಾಗುವ ಕೀರ್ತಿಯಿಂದ ಕೂದಲೆಳೆಯಿಂದ ತಪ್ಪಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್ ಈಗ ಟೆಸ್ಟ್ ನಲ್ಲಿ ವೇಗದ 300 ವಿಕೆಟ್ ಕೆಡವಿದ ಬೌಲರ್ ಆಗಿ ರೂಪುಗೊಂಡಿದ್ದಾರೆ. ಶ್ರೀಲಂಕಾದ ಗಮಂಗೆ ವಿಕೆಟ್ ಕಬಳಿಸುತ್ತಿದ್ದಂತೆ ಅಶ್ವಿನ್ ಈ ನೂತನ ದಾಖಲೆಯನ್ನು ನಿರ್ಮಿಸಿ ಆಸ್ಟ್ರೇಲಿಯಾದ ಡೆನಿಸ್ ಲಿಲ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಡೆನಿಸ್ ಲಿಲ್ಲಿ 300 ವಿಕೆಟ್‍ಗಳನ್ನು ಕಬಳಿಸಲು 56 ಟೆಸ್ಟ್‍ಗಳಲ್ಲಿ ಆಡಿದ್ದರೆ, ಭಾರತದ ರವಿಚಂದ್ರನ್ ಅಶ್ವಿನ್ ಕೇವಲ 54 ಪಂದ್ಯಗಳಲ್ಲೇ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಭಾರತದ ಅನಿಲ್‍ಕುಂಬ್ಳೆ 300 ವಿಕೆಟ್‍ಗಳನ್ನು ಗಳಿಸಲು 66 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಸ್ಪಿನ್ ಮಾಂತ್ರಿಕರಾದ ಮುತ್ತಯ್ಯ ಮುರಳೀಧರನ್ (58 ಪಂದ್ಯ) ಹಾಗೂ ಶೇನ್‍ವಾರ್ನ್ (61 ಪಂದ್ಯ)ಗಳನ್ನು ತೆಗೆದುಕೊಂಡಿದ್ದಾರೆ.

ಈ ಹಿಂದೆ 37 ಪಂದ್ಯಗಳಲ್ಲಿ 200 ವಿಕೆಟ್‍ಗಳನ್ನು ಕಬಳಿಸಿದ್ದ ರವಿಚಂದ್ರನ್ ಅಶ್ವಿನ್ ಅಗ್ರನಾಗುವ ಅವಕಾಶದಿಂದ ಕೇವಲ 1 ಪಂದ್ಯದಿಂದ ವಂಚಿತರಾಗಿದ್ದರು, ಅತಿ ವೇಗದ 200 ವಿಕೆಟ್ ಕಬಳಿಸಿದ ಕೀರ್ತಿ ಆಸ್ಟ್ರೇಲಿಯಾದ ಗಿರ್ರ್‍ಮಿಟ್ ಹೆಸರಿನಲ್ಲಿದ್ದರೆ, ಡೆನಿಸ್ ಲಿಲ್ಲಿ 3ನೆ ಸ್ಥಾನದಲ್ಲಿದ್ದಾರೆ.

Facebook Comments

Sri Raghav

Admin