ನಕ್ಸಲರ ದಾಳಿಯಲ್ಲಿ ಹುತಾತ್ಮನಾದ ಧಾರವಾಡದ ವೀರ ಯೋಧ

ಈ ಸುದ್ದಿಯನ್ನು ಶೇರ್ ಮಾಡಿ

Naxal-Attakc-v02

ಧಾರವಾಡ, ನ.27- ಮಹಾರಾಷ್ಟ್ರದ ಗಡ್‍ಚಿರೋಲಿ ಪ್ರದೇಶದಲ್ಲಿ ನಕ್ಸಲರ ದಾಳಿಯಲ್ಲಿ ತೀವ್ರ ಗುಂಡೇಟಿಗೆ ಒಳಗಾಗಿದ್ದ ಧಾರವಾಡದ ಸಿಆರ್‍ಪಿಎಫ್ ಯೋಧ ಮಂಜುನಾಥ್ ಜಕ್ಕಣ್ಣನವರ್ (31) ಇಂದು ಬೆಳಗ್ಗೆ ಹುತಾತ್ಮರಾಗಿದ್ದಾರೆ.

ಧಾರವಾಡದ ಮನಗುಂಡಿ ಗ್ರಾಮದ ನಿವಾಸಿ ಮಂಜುನಾಥ್ ಜಕ್ಕಣ್ಣನವರ್ 10 ವರ್ಷಗಳ ಹಿಂದೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್)ಗೆ ಸೇರಿದ್ದರು. ಪ್ರಸ್ತುತ 130ನೆ ಬೆಟಾಲಿಯನ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.1986ರಲ್ಲಿ ಏ.31ರಂದು ಜನಿಸಿದ್ದ ಮಂಜುನಾಥ್ ದೇಶಪ್ರೇಮಿಯಾಗಿದ್ದರು. ನಾಳೆ ಅವರ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ಬರಲಿದ್ದು, ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Facebook Comments

Sri Raghav

Admin