ನಾನೇ ಜಯಾಲಲಿತಾರ ಮಗಳು ಎಂದು ಸುಪ್ರೀಂನಲ್ಲಿ ಮಂಜುಳಾ ಸಲ್ಲಿಸಿದ್ದ ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Jayalalita--Manjula

ನವದೆಹಲಿ, ನ.27- ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ.ಜಯಲಲಿತಾ ಅವರ ಖಾಸಾ ಮಗಳು ನಾನೇ ಎಂದು ಉತ್ತರಾಧಿಕಾರದ ಹಕ್ಕು ಪ್ರತಿಪಾದಿಸುತ್ತಾ ಬಂದಿರುವ ಬೆಂಗಳೂರಿನ ಮಂಜುಳಾ(ಅಮೃತಾ/ಅಮ್ಮು) ಎಂಬಾಕೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ನಾನೇ ಜಯಾಲಲಿತಾರ ಮಗಳು ಎಂದು ವಾದಿಸಿ ತನ್ನ ತಾಯಿಯ ಅಂತ್ಯ ಸಂಸ್ಕಾರಕ್ಕೆ ಅಯ್ಯಂಗಾರ್ ಬ್ರಾಹ್ಮಣರ ಸಂಪ್ರದಾಯದಂತೆ ಅವಕಾಶ ನೀಡುವಂತೆ ಕೋರಿ ಮಂಜುಳಾ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

Jayalalita--01

ಈ ಮೂಲಕ ಜಯಾ ಅವರ ಬದುಕಿನ ವೈಯಕ್ತಿಕ ರಹಸ್ಯ ಮತ್ತೊಂದು ಹೊಸ ರೂಪ ಪಡೆದಿತ್ತು. ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠವು ಮಂಜುಳಾ ಅರ್ಜಿಗೆ ಅವಕಾಶ ನೀಡಲು ನಿರಾಕರಿಸಿತ್ತು. ಅಲ್ಲದೇ ನಾನೇ ಆಕೆಯ ಮಗಳು ಎಂಬುದನ್ನು ಸಾಬೀತು ಮಾಡಲು ಡಿಎನ್‍ಎ ಪರೀಕ್ಷೆಗೆ ಒಳಪಡಿಸಬೇಕೆಂಬ ಮನವಿಯನ್ನೂ ತಳ್ಳಿ ಹಾಕಿದೆ.  ಆದಾಗ್ಯೂ ಈ ವಿಷಯದಲ್ಲಿ ಹೈಕೋರ್ಟ್ ಮೊರೆ ಹೋಗಲು ಅರ್ಜಿದಾರರಿಗೆ ಸುಪ್ರೀಂಕೋರ್ಟ್ ಸ್ವಾತಂತ್ರ್ಯ ನೀಡಿದೆ.

ಜಯಲಲಿತಾ ಅವರ ಮಗಳು ನಾನೇ ಎಂಬುದನ್ನು ಸಾಬೀತು ಮಾಡಲು ನಾನು
ಡಿಎನ್‍ಎ ಪರೀಕ್ಷೆಗೂ ಸಿದ್ದ ಎಂದು ಮಂಜುಳಾ ಮನವಿಯಲ್ಲಿ ತಿಳಿಸಿದ್ದರು. ಈಕೆಯ ಪರವಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಕಾಲತ್ತು ವಹಿಸಿದ್ದರು. ಜಯಾ ಅವರ ಆಸ್ತಿ ಮೇಲೆ ಒಡೆತನ ಸಾಧಿಸಲು ಅವರ ಸೋದರ ಸೊಸೆ (ಜಯಕುಮಾರ್ ಮಗಳು) ದೀಪಾ ಪ್ರತಿಪಾದಿಸುತ್ತಿರುವ ಸಂದರ್ಭದಲ್ಲೇ ಮಂಜುಳಾ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿರುವುದು ದಿವಂಗತ ಮುಖ್ಯಮಂತ್ರಿಯ ವೈಯಕ್ತಿಕ ಬದುಕಿನ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿದೆ.

ಯಾರು ಈ ಮಂಜುಳಾ..?

ಜಯಾ ಪುತ್ರಿ ಎಂದು ಹೇಳಿಕೊಳ್ಳುತ್ತಿರುವ ಮಂಜುಳಾ ಅಲಿಯಾಸ್ ಅಮೃತಾ ಅಲಿಯಾಸ್ ಅಮ್ಮು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಜಯಲಲಿತಾ ಮತ್ತು ಒಂದು ಕಾಲದಲ್ಲಿ ತೆಲುಗಿನ ಸೂಪರ್‍ಸ್ಟಾರ್ ಆಗಿದ್ದ ಶೋಭನ್ ಬಾಬು ಅವರ ಮಗಳು ತಾನೆಂದು ಈಕೆ ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದಾಳೆ. ಇವರಿಬ್ಬರ ಪ್ರೀತಿಯ ಫಲವಾಗಿ ಜಯಾಲಲಿತಾ ಗರ್ಭವತಿಯಾದರು. ಚೆನ್ನೈನ ಮೈಲಾಪುರದಲ್ಲಿ ಮಂಜುಳಾಗೆ ಜನ್ಮವಿತ್ತರು. ಈಕೆಗೆ ಜಯಾಲಲಿತಾ ತನ್ನ ತಾಯಿ ಎಂಬುದು ಗೊತ್ತಾಗದಂತೆ ಅತ್ಯಂತ ಗೋಪ್ಯವಾಗಿ ಇಡಲಾಗಿತ್ತು ಎಂಬ ಸಂಗತಿಯನ್ನು ಮಾಧ್ಯಮಗಳು ಇತ್ತೀಚೆಗೆ ಬಹಿರಂಗಗೊಳಿಸಿದ್ದವು.

Facebook Comments

Sri Raghav

Admin