ನುಡಿಹಬ್ಬದಲ್ಲಿ ಒಂದು ಕೋಟಿ ದಾಟಿದ ಪುಸ್ತಕ-ವ್ಯಾಪಾರ ವ್ಯವಹಾರ

ಈ ಸುದ್ದಿಯನ್ನು ಶೇರ್ ಮಾಡಿ

Kannada-Book--014

ಮೈಸೂರು,ನ.27- ಕಳೆದ ಮೂರು ದಿನಗಳಿಂದ ನಗರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಕೋಟಿ ರೂ.ಗೂ ಹೆಚ್ಚಿನ ಪುಸ್ತಕಗಳು ಮಾರಾಟವಾಗಿವೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರೇಮಿಗಳು ಇನ್ನಿಲ್ಲದಂತೆ ಪುಸ್ತಕಗಳನ್ನು ಖರೀದಿಸಿದ್ದಾರೆ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ 250ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ತೆರೆಯಲಾಗಿದ್ದು, ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಪುಸ್ತಕ ಮಾರಾಟಗಾರರು ತಮ್ಮ ಮಳಿಗೆಗಳನ್ನು ತೆರೆದಿದ್ದರು.
ರಾಜ್ಯದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳಾದ ಬೆಂಗಳೂರು ಮುದ್ರಾಣಾಲಯ, ಶಿವಮೊಗ್ಗದ ಗೀತಾಂಜಲಿ ಪುಸ್ತಕ ಪ್ರಕಾಶನ, ಸ್ವಪ್ನ ಬುಕ್ ಹೌಸ್ ನವ ಕರ್ನಾಟಕ ಪುಸ್ತಕ ಪ್ರಕಾಶನ, ಅಭಿರುಚಿ ಸೇರಿದಂತೆ 150ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಯವರು ತಮ್ಮ ಮಳಿಗೆಗಳನ್ನು ತೆರೆದು ಪುಸ್ತಕ ಮಾರಾಟ ಮಾಡಿದ್ದಾರೆ.

ಈ ಹಿಂದೆ ಪುಸ್ತಕ ಮಳಿಗೆಗಳು ಎಂದರೆ ಎತ್ತರ ಎತ್ತರವಾಗಿ ಪುಸ್ತಕವನ್ನು ಜೋಡಿಸುತ್ತಿದ್ದರು. ಆದರೆ ಮೈಸೂರಿನಲ್ಲಿ ನಡೆದ ಮೇಳದಲ್ಲಿ ಪುಸ್ತಕಗಳನ್ನು ವಿವಿಧ ರೀತಿಯಲ್ಲಿ ಜೋಡಿಸಿ, ಹೂವಿನ ಅಲಂಕಾರ ಮಾಡಿ ಆಕರ್ಷಿಸಲಾಗಿತ್ತು ಹಾಗೂ ಮಕ್ಕಳ ಕಥೆ ಪುಸ್ತಕಗಳನ್ನು ವಿವಿಧ ಆಕಾರಗಳಲ್ಲಿ ಜೋಡಿಸಿದ್ದು ಮಕ್ಕಳನ್ನು ಸೆಳೆಯುವಂತಿತ್ತು. ಪುಸ್ತಕ ಮಳಿಗೆಗಳಲ್ಲಿ ದಾ.ರಾ.ಬೇಂದ್ರೆ, ಕುವೆಂಪು ಮಹಾದೇವ, ಅನಕೃ, ಎಸ್.ಎಲ್.ಭೈರಪ್ಪ ಲಂಕೇಶ್ ಸೇರಿದಂತೆ ಖ್ಯಾತ ಸಾಹಿತಿಗಳ ಪುಸ್ತಕಗಳು ಮಾರಾಟವಾಗಿವೆ.

Facebook Comments

Sri Raghav

Admin