ಪೌರಕಾರ್ಮಿಕರಿಗೂ ಎಲೆಕ್ಷನ್ ಟಿಕೆಟ್ ಕೊಡಿ

ಈ ಸುದ್ದಿಯನ್ನು ಶೇರ್ ಮಾಡಿ

BBMP-01

ಬೆಂಗಳೂರು,ನ.27-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ನಮ್ಮ ಸಮುದಾಯದ ಮುಖಂಡರಿಗೆ ಶೇ.2ರ ಮೀಸಲಾತಿ ನೀಡಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಪೌರಕಾರ್ಮಿಕ ಸಂಘದ ವೇದಿಕೆ ಅಧ್ಯಕ್ಷ ಎಂ.ಸುಬ್ಬರಾಯುಡು ಆಗ್ರಹಿಸಿದ್ದಾರೆ. ಇಂದು ಸದ್ದಿಗೋಷ್ಟಿಯಲ್ಲಿ ಈ ಕುರಿತಂತೆ ಮಾತನಾಡಿದ ಅವರು, ಚಾಮರಾಜಪೇಟೆ, ಗಾಂಧಿನಗರ, ಚಿಕ್ಕಪೇಟೆ, ಶಿವಾಜಿನಗರ, ಬಿನ್ನಿಪೇಟೆ, ಸಿ.ವಿ.ರಾಮನ್‍ನಗರ, ಪುಲಿಕೇಶಿನಗರ,ಶಾಂತಿನಗರ ಸೇರಿದಂತೆ ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪೌರ ಕಾರ್ಮಿಕ ಜನಾಂಗ(ಪರಿಶಿಷ್ಟ ಜಾತಿ)ದವರು ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು ನಿರ್ಣಾಯಕರಾಗಿದ್ದಾರೆ ಎಂದು ಅವರು ಹೇಳಿದರು.

1978ರಲ್ಲಿ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಪೌರಕಾರ್ಮಿಕ ಸಮುದಾಯದ ಮುಖಂಡ ಐಡಿಪಿ ಸಾಲಪ್ಪ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು. ಅವರು ಅಲ್ಲಿ ಗೆಲುವು ಸಾಧಿಸಿದ್ದು ದಾಖಲೆಯಾಗಿತ್ತು. ಈಚೆಗೆ ಪೌರಕಾರ್ಮಿಕ ಸಮುದಾಯಕ್ಕೆ ಸೇರಿದ ಮಾಜಿ ಮಹಾಪೌರ ಹಾಗೂ ಕಾಂಗ್ರೆಸ್ ಮುಖಂಡ ಕೆ.ಸಿ.ವಿಜಿಕುಮಾರ್ ಅವರಿಗೆ 2008ರ ವಿಧಾನಸಭೆ ಚುನಾವಣೆಯಲ್ಲಿ ಸಿ.ವಿ.ರಾಮನ್‍ನಗರ ಮೀಸಲು ಪಕ್ಷಕ್ಕೆ ಟಿಕೆಟ್ ನೀಡಿತ್ತು. ಅಲ್ಲಿಂದೀಚೆಗೆ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆತಿಲ್ಲ.
ಆದ್ದರಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಪರಿಶಿಷ್ಟ ಜಾತಿ(ಪೌರ ಕಾರ್ಮಿಕ) ಸಮುದಾಯದವರಿಗೆ ಟಿಕೆಟ್ ನೀಡಿ ಶಾಸನ ಸಭೆಯಲ್ಲಿ ನಮ್ಮ ಪರ ದನಿ ಎತ್ತುವ ಅವಕಾಶ ಮಾಡಿಕೊಡಬೇಕು. ನಮ್ಮ ಸಮುದಾಯದಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವಂತಹ ಹಲವು ಮುಖಂಡರಿದ್ದಾರೆ. ಅವರಿಗೆ ಟಿಕೆಟ್ ನೀಡಬೇಕು ಎಂದು ಸುಬ್ಬರಾಯುಡು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಜಯರಾಮ್, ಉಪಾಧ್ಯಕ್ಷ ಕೆ.ಪೆಂಚಾಲಯ್ಯ ಮತ್ತಿತರರು ಇದ್ದರು.

Facebook Comments

Sri Raghav

Admin