ಪ್ರಧಾನಿ ಮೋದಿ ವಿರುದ್ಧ ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Arun--02

ನವದೆಹಲಿ, ನ.27-ಪ್ರಧಾನಮಂತ್ರಿಯವರ ಕಾರ್ಯಾಲಯದಲ್ಲಿ ಅಧಿಕಾರ ಕೇಂದ್ರೀಕರಣಗೊಂಡಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಭದ್ರತೆಗೆ ಹಿಡಿದ ಕನ್ನಡಿ ಎಂದು ಖ್ಯಾತ ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಟೀಕಿಸಿದ್ದಾರೆ. ಟೈಮ್ಸ್ ಲಿಟ್ ಫೆಸ್ಟಿವಲ್‍ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಉದ್ಯೋಗ ಸೃಷ್ಟಿ ಸೇರಿದಂತೆ ಕೇಂದ್ರ ಸರ್ಕಾರ ನೀಡಿರುವ ಭರವಸೆಗಳು ವಿಫಲವಾಗಿವೆ. ಭ್ರಮಾಲೋಕ ಮೋದಿ ಆಡಳಿತದ ಹೆಗ್ಗುರುತು ಎಂದು ಅವರು ಲೇವಡಿ ಮಾಡಿದ್ದಾರೆ.

ಮೋದಿ ಮಹಾ ಚತುರ ರಾಜಕಾರಣಿ. ಅಭಿವೃದ್ದಿ ಕುರಿತು ನೀಡಿದ ಆಶ್ವಾಸನೆ ಈಡೇರಿಸಲು ಸಾಧ್ಯವಿಲ್ಲ ಎಂದು ಮನವರಿಕೆಯಾದ ಕೂಡಲೇ ಚಾಣಾಕ್ಷ ಮೋದಿ ಜನರನ್ನು ವಿಭಜಿಸಿ ಅಧಿಕಾರ ನಡೆಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಶೌಟಿ ಟೀಕಿಸಿದರು.

Facebook Comments

Sri Raghav

Admin