ಮನ್ ಕಿ ಬಾತ್ ನಲ್ಲಿ ಕರ್ನಾಟಕ ಮಕ್ಕಳ ಪ್ರತಿಭೆ ನೆನೆದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ, ನ.27- ಕರ್ನಾಟಕದ ಮಕ್ಕಳೊಂದಿಗೆ ಸಂವಾದ ನಡೆಸುವ ಅವಕಾಶ ನನಗೆ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಲಭಿಸಿತು. ಆ ರಾಜ್ಯದ ಮಕ್ಕಳು ತುಂಬಾ ಪ್ರತಿಭಾವಂತರು. ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದಕ್ಕೆ ನನಗೆ ಖುಷಿಯಾಯಿತು ಎಂದು ಮೋದಿ ಹೇಳಿದರು. ಆಕಾಶವಾಣಿಯಲ್ಲಿ ಪ್ರತಿ ತಿಂಗಳ ಕೊನೆ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದ 39ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಭಾರತವು ಕಳೆದ 40 ವರ್ಷಗಳಿಂದ ಉಗ್ರವಾದದಿಂದ ನರಳುತ್ತಿದೆ. ಇದು ಮನುಕುಲಕ್ಕೆ ದೊಡ್ಡ ಕಳಂಕವಾಗಿದೆ. ಆತಂಕವಾದ ವಿನಾಶಕಾರಿ ಭೀಕರತೆಯು ವಿಶ್ವಕ್ಕೆ ಮನವರಿಕೆಯಾಗಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಇಡೀ ಮನುಕುಲ ಒಂದಾಗಿ ನಿಲ್ಲಬೇಕು ಎಂದು ಹೇಳಿದರು.

Facebook Comments

Sri Raghav

Admin