ರೌಡಿ ಮಂಜನ ಮನೆ ಮೇಲೆ ಪೆಟ್ರೋಲ್ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

Petrol-Bomb--02

ಬೆಂಗಳೂರು,ನ.27-ರೌಡಿಶೀಟರ್ ಮಂಜನ ಮನೆ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ದುಷ್ಕøತ್ಯ ಮೆರೆದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆತ್ತನಗೆರೆ ಗ್ರಾಮದಲ್ಲಿ ರೌಡಿ ಮಂಜನ ಮನೆಯಿದ್ದು , ರಾತ್ರಿ ಮನೆಯಲ್ಲಿ ತಂದೆ ಮಲಗಿದ್ದರು. ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಕಾರಿನಲ್ಲಿ ಬಂದ ಮೂರು ದುಷ್ಕರ್ಮಿಗಳು ಕುಡಿಯುವ ನೀರಿನ ಬಾಟಲ್‍ಗೆ ಪೆಟ್ರೋಲ್ ತುಂಬಿ ಬೆಂಕಿ ಹಚ್ಚಿ ಈತನ ಮನೆ ಮೇಲೆ ಎಸೆದು ಪರಾರಿಯಾಗಿದ್ದಾರೆ.

ಪರಿಣಾಮವಾಗಿ ಮನೆಗೆ ಬೆಂಕಿ ತಾಗಿದ್ದು , ಇದನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಮನೆಯೊಳಗಿದ್ದ ಮಂಜನ ತಂದೆಯನ್ನು ಎಬ್ಬಿಸಿ ಹೊರಗೆ ಕರೆತಂದು ಬೆಂಕಿ ನಂದಿಸಿದ್ದಾರೆ.  ಸುದ್ದಿ ತಿಳಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು ಹಳೆಯ ದ್ವೇಷದಿಂದ ಕೃತ್ಯ ವೆಸಗಿರುವ ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin