ಶಾಸಕ ಮುನಿರತ್ನ ಸಹೋದರ ಸೇರಿ 10 ಮಂದಿ ವಿರುದ್ಧ ದೋಷಾರೋಪಣಣೆ ಪಟ್ಟಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Karnataka-lokayukta

ಬೆಂಗಳೂರು, ನ.27- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟೆಂಡರ್ ನಕಲಿ ಬಿಲ್ ಸೃಷ್ಟಿಸಿದ ಆರೋಪದಲ್ಲಿ ಶಾಸಕ ಮುನಿರತ್ನ ಸಹೋದರ ವೆಂಕಟರತ್ನ ಸೇರಿದಂತೆ 10 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಲಯಕ್ಕೆ ದೋಷಾರೋಪಣಣೆ ಪಟ್ಟಿ ಸಲ್ಲಿಸಿದ್ದಾರೆ.
ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಇಡೆನ್‍ವೆಂಡನ್, ಸಹಾಯಕ ಎಂಜಿನಿಯರ್‍ಗಳಾದ ಐ.ಕೆ.ವಿಶ್ವಾಸ್, ಎಂ.ನಾಗರಾಜ್, ಗುತ್ತಿಗೆದಾರರಾದ ಬಿ.ಎಸ್.ಪ್ರಸಾದ್, ಶೈಲಜಾ, ಡಿ.ರಂಗನಥ್, ಕೆ.ನರಸಿಂಹಮೂರ್ತಿ, ಎಚ್.ರಮೇಶ್ ಸೇರಿದಂತೆ 10 ಮಂದಿ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.
ಆರೋಪಿಗಳು 2012ರಿಂದ 2014ರಲ್ಲಿ ನಡೆದ ಕಾಮಗಾರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ ವೇಳೆ ದೃಢಪಟ್ಟಿದೆ. ಬಿಆರ್ ಬುಕ್‍ಗಳಲ್ಲಿ ದಾಖಲೆಗಳನ್ನು ಸೇರಿಸುವುದು, ಎಂಬಿ ಮಾಹಿತಿಗಳನ್ನು ತುಂಬುವುದು, ಸಹಿ, ಟೆಂಡರ್ ಕಾಮಗಾರಿ ಅಳತೆಯನ್ನು ನಮೂದಿಸುವುದು, ದಾಖಲೆಗಳನ್ನು ಸೃಷ್ಟಿಸಿ ಸೀಲು ಹಾಕುವುದು ಸೇರಿದಂತೆ ಹಲವು ಅಂಶಗಳು ತನಿಖೆಯ ಸಂದರ್ಭದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾಯ್ದೆ 8, 10, 13(1)(ಸಿ)(ಡಿ), 13(2), ಭ್ರಷ್ಟಾಚಾರ ನಿಗ್ರಹ ಕಾಯ್ದೆ ಐಪಿಸಿ ಸೆಕ್ಷನ್ 471 ಹಾಗೂ 420ರ ಅನ್ವಯ ಆರೋಪ ಪಟ್ಟಿ ದಾಖಲಿಸಲಾಗಿದೆ.

ಶಾಸಕ ಮುನಿರತ್ನ ಅವರಿಗೆ ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಕ್ಲೀನ್‍ಚಿಟ್ ನೀಡಿದ್ದಾರೆ. ರಾಜರಾಜೇಶ್ವರಿನಗರದಲ್ಲಿ 120 ಕೋಟಿ ಕಾಮಗಾರಿಗಳ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು 2014ರ ಡಿ.27ರಂದು ವೈ.ಎಚ್.ಶ್ರೀನಿವಾಸ್ ಎಂಬುವರು ನೀಡಿದ್ದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ವೈಯಾಲಿಕಾವಲ್‍ನಲ್ಲಿರುವ ಮುನಿರತ್ನ ಅವರ ಮಾಲೀಕತ್ವದ ಮನೆ ಮೇಲೆ ದಾಳಿ ನಡೆದಿ 1200 ಕಡತಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಿ ಕೋರ್ಟ್‍ಗೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

Facebook Comments

Sri Raghav

Admin