ಹೊಗೆ ಉಗುಳುತ್ತಿರುವ ಬಾಲಿ ಜ್ವಾಲಾಮುಖಿ, ಆತಂಕದಲ್ಲಿ ಲಕ್ಷಾಂತರ ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

Bali--02

ಕರಂಗಸೆಮ್(ಇಂಡೋನೆಷ್ಯಾ), ನ.27- ಇಂಡೋನೆಷ್ಯಾದ ವಿಶ್ವವಿಖ್ಯಾತ ವಿಹಾರಧಾಮ ಬಾಲಿ ದ್ವೀಪದ ಅಗ್ನಿಪರ್ವತವೊಂದು ಹೊಗೆ ಉಗುಳಲಾರಂಭಿಸಿದ್ದು, ಅಪಾಯ ವಲಯವನ್ನು ಅಧಿಕಾರಿಗಳು ವಿಸ್ತರಿಸಿದ್ದಾರೆ. ಜ್ವಾಲಾಮುಖಿ ಸಮೀಪದ ಗ್ರಾಮಗಳಿಂದ ಸಹಸ್ರಾರು ಮಂದಿಯನ್ನು ತೆರವುಗೊಳಿಸಲಾಗುತ್ತಿದೆ. ದ್ವೀಪ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಚ್ಚಿರುವ ಕಾರಣ ಸಾವಿರಾರು ಪ್ರವಾಸಿಗರು ಅತಂತ್ರಕ್ಕೆ ಒಳಗಾಗಿದ್ದಾರೆ.

ಮೌಂಟ್ ಆಗುಂಗ್ ಅಗ್ನಿಪರ್ವತ ಮತ್ತಷ್ಟು ಸಕ್ರಿಯವಾಗಿದ್ದು, 9,800 ಅಡಿಗಳಷ್ಟು ಎತ್ತರಕ್ಕೆ ಬಿಳಿ ಮಿಶ್ರಿತ ಕಪ್ಪು ಹೊಗೆಯನ್ನು ಕಾರಲು ಆರಂಭಿಸಿದೆ. ಜ್ವಾಲಾಮುಖಿ ಪರ್ವದ ಇಳಿಜಾರುಗಳಿಂದ ಲಹರ್ (ಜ್ವಾಲಮುಖಿ ಗರ್ಭದ ಮಣ್ಣು ಮತ್ತು ನೀರು) ಹರಿಯಲಾರಂಭಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಇಂದು ಗರಿಷ್ಠ ಮಟ್ಟದ ಎಚ್ಚರಿಕೆ ನೀಡಿದ್ದು, ಅಪಾಯ ವಲಯವನ್ನು 10 ಕಿ.ಮೀ.ಗಳಿಗೆ ವಿಸ್ತರಿಸಿದೆ. ಅಪಾಯ ವಲಯದಲ್ಲಿ 22ಕ್ಕೂ ಹೆಚ್ಚು ಗ್ರಾಮಗಳ ಸುಮಾರು ಒಂದು ಲಕ್ಷ ಮಂದಿ ಸಿಲುಕಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತದೆ. ಜಾಲ್ವಾಮುಖಿ ಸ್ಫೋಟಗೊಂಡರೆ ಕೈಗೊಳ್ಳಬೇಕಾದ ಸಮರೋಪಾದಿಯ ತ್ವರಿತ ಕ್ರಮಗಳಿಗೆ ರಕ್ಷಣಾ ಕಾರ್ಯಕರ್ತರು ಸಜ್ಜಾಗಿದ್ದಾರೆ.

Facebook Comments

Sri Raghav

Admin