ಐಎಸ್‍ಎಸ್ ಕಕ್ಷೆಯಲ್ಲಿನ ಅವಶೇಷಗಳ ಪತ್ತೆಗೆ ಸೆನ್ಸರ್ ಉಡಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ISS--02

ವಾಷಿಂಗ್ಟನ್, ನ.28-ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ(ಐಎಸ್‍ಎಸ್) ಕಕ್ಷೆಯಲ್ಲಿರುವ ಅವಶೇಷಗಳಿಂದ ಗಗನಯಾತ್ರಿಗಳು ಮತ್ತು ಉಪಗ್ರಹಗಳಿಗೆ ಅಪಾಯವಾಗುವುದನ್ನು ತಪ್ಪಿಸಲು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಮುಂದಾಗಿದೆ. ಈ ಉದ್ದೇಶಕ್ಕಾಗಿ ಡಿ.4ರಂದು ಸಂವೇದಿ (ಸೆನ್ಸರ್) ಸಾಧನವೊಂದನ್ನು ನಭಕ್ಕೆ ಉಡಾವಣೆ ಮಾಡಲಿದೆ. ಐಎಸ್‍ಎಸ್ ಸುತ್ತಲಿನ ಕಕ್ಷೆಯಲ್ಲಿರುವ ಅವಶೇಷಗಳ ಪ್ರಮಾಣದ ಬಗ್ಗೆ ಈ ಸೆನ್ಸರ್ ಅಂದಾಜು ಮಾಡಲಿದ್ದು, ಅವುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲಿದೆ.

ಈ ಸೆನ್ಸರ್ ಉಡ್ಡಯನ ಮೂಲಕ ನಡೆಸಲಾಗುವ ಸಂಶೋಧನೆಯು ಬಾಹ್ಯಾಕಾಶ ಮಾರ್ಗದಲ್ಲಿರುವ ಅವಶೇಷಗಳು ವ್ಯೋಮಾಯಾನಿಗಳು ಮತ್ತು ಉಪಕರಣಗಳಿಗೆ ಎದುರಾಗುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ನಾಸಾ ತಿಳಿಸಿದೆ. ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣದ ಹೊರಭಾಗದಲ್ಲಿ ಜೋಡಿಸಲ್ಪಡುವ ಬಾಹ್ಯಾಕಾಶ ಸಂವೇದಿ ಸಾಧನ (ಸ್ಪೇಸ್ ಡೆಬ್ರಿಸ್ ಸೆನ್ಸರ್-ಎಸ್‍ಡಿಎಸ್) ಸುಮಾರು ಮೂರು ವರ್ಷಗಳ ಕಾಲ ಅದರ ಸುತ್ತಲಿನ ಕಕ್ಷೆಯಲ್ಲಿರುವ ಅವಶೇಷಗಳ ಪ್ರಮಾಣ, ಸ್ಥಿತಿಗತಿಗಳನ್ನು ಅಂದಾಜು ಮಾಡಲಿದೆ.

Facebook Comments

Sri Raghav

Admin