ಗಿಡಗಳನ್ನು ಹಾಳು ಮಾಡಿದ ಕತ್ತೆಗಳಿಗೆ 4 ದಿನಗಳ ಜೈಲುಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

kanpura--02

ಕಾನ್ಪುರ, ನ.28- ಗಿಡಗಳನ್ನು ಹಾಳು ಮಾಡಿದ್ದರ ಹಿನ್ನೆಲೆಯಲ್ಲಿ ಎಂಟು ಕತ್ತೆಗಳಿಗೆ 4 ದಿನಗಳ ಕಾಲ ಜೈಲುಶಿಕ್ಷೆ ವಿಧಿಸಿದ್ದ ವಿಚಿತ್ರವಾದ ಘಟನೆ ಉತ್ತರ ಪ್ರದೇಶದ ಜಲೂನ್ ಪ್ರಾಂತ್ಯದಲ್ಲಿ ನಡೆದಿದೆ.  ಸ್ವಚ್ಛ ಭಾರತ ಮಿಷನ್ ಅಭಿಯಾನದಡಿ ಪರಿಸರ ಸಂರಕ್ಷಣೆಗಾಗಿ ನಡೆಲಾಗಿದ್ದ ಗಿಡಗಳನ್ನು ಈ ಕತ್ತೆಗಳು ತಿಂದು ಹಾಕಿದ್ದರಿಂದ ಕಳೆದ 4 ದಿನಗಳಿಂದ ಒರಾಯ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದೆ.  ಸ್ಥಳೀಯ ಕಮಲೇಶ್‍ಗೆ ಸೇರಿದ್ದ ಈ ಕತ್ತೆಗಳು ಈ ಹಿಂದೆ ಅನೇಕ ಬಾರಿ ಬೆಳೆಗಳನ್ನು ಹಾಳು ಮಾಡಿದ್ದು ಇದರ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಕಮಲೇಶ್‍ಗೆ ಎಚ್ಚರಿಕೆಯನ್ನು ನೀಡಲಾಗಿತ್ತು.

ಆದರೆ ಕಳೆದ 24 ರಂದು ಮತ್ತೆ ಬೆಳೆಬಾಳುವ ಗಿಡಗಳನ್ನು ಈ ಕತ್ತೆಗಳು ತಿಂದು ಹಾಳು ಮಾಡಿದ್ದರಿಂದ ಈ ಕತ್ತೆಗಳಿಗೆ ಜೇಲುವಾಸ ವಿಧಿಸಲಾಗಿತ್ತು ಎಂದು ಒರಾಯ್ ಠಾಣೆಯ ಮುಖ್ಯಪೇದೆ ಆರ್.ಕೆ.ಮಿಶ್ರಾ ತಿಳಿಸಿದ್ದಾರೆ. ಜಿಲ್ಲಾ ಠಾಣೆಯಲ್ಲಿ ಮುಖ್ಯ ಪೆÇಲೀಸ್ ಅಧಿಕಾರಿ ಸೀತಾ ರಾಮ್ ಶರ್ಮಾರನ್ನು ಭೇಟಿ ಮಾಡಿದ ನಂತರ ಕತ್ತೆಗಳನ್ನು ಬಿಡುಗಡೆ ಮಾಡಲಾಗಿದೆ.  ಆದರೆ ಮಾಲೀಕನ ನಿರ್ಲಕ್ಷ್ಯತೆಯಿಂದ ಎಂಟು ಕತ್ತೆಗಳು 4 ದಿನಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದು ಮಾತ್ರ ವಿಪರ್ಯಾಸ.

Facebook Comments

Sri Raghav

Admin