ನಟಿ ಜೊತೆ ಸ್ವಾಮೀಜಿ ರಾಸಲೀಲೆಗೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Swamiji--Sex--03

ಬೆಂಗಳೂರು, ನ.28- ಯಲಹಂಕ ಬಳಿಯ ಮದ್ದೇವಣ್ಣಪುರ ಮಠದ ಕಿರಿಯ ಸ್ವಾಮೀಜಿಯ ರಾಸಲೀಲೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಕಳೆದ ಒಂದು ತಿಂಗಳ ಹಿಂದೆ ನಟಿಯೊಂದಿಗೆ ಈ ಸ್ವಾಮೀಜಿ ಇದ್ದ ರಾಸಲೀಲೆ ವಿಡಿಯೋ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಮಠದ ಭಕ್ತರು ಹಾಗೂ ಸ್ವಾಮೀಜಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಈಗ ಈ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಈ ಸಿಡಿಯಲ್ಲಿ ಇದ್ದಾರೆನ್ನಲಾದ ನಟಿ ತನಗೆ ಕೊಲೆ ಬೆದರಿಕೆ ಇರುವುದಾಗಿ ಹೇಳಿಕೆ ನೀಡಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಾಧ್ಯಮದೆದುರು ಬಂದು ಎಲ್ಲ ವಿವರಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಹಾಗೂ ಕೊಲೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಇಷ್ಟು ದಿನ ಅಜ್ಞಾತವಾಗಿ ಇರಬೇಕಾಗಿ ಬಂದಿತ್ತು ಎಂದಿರುವ ಅವರು, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಬಂದು ನನಗೆ ಕಿರುಕುಳ ಕೊಟ್ಟ ಹಾಗೂ ನನ್ನನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡ 10 ಜನರ ವಿರುದ್ಧ ದೂರು ದಾಖಲಿಸುವುದಾಗಿ ಇವರು ಹೇಳಿದ್ದಾರೆ.

ನನ್ನ ಸ್ಥಿತಿ ಯಾವ ಹೆಣ್ಣಿಗೂ ಬಾರದಿರಲಿ. ವೈಯಕ್ತಿಕ ದಾಳವಾಗಿ ಕೆಲವರು ನನ್ನನ್ನು ಬಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲ ಸತ್ಯಗಳನ್ನೂ ಹೊರಗಿಡುವುದಾಗಿ ಅವರು ತಿಳಿಸಿದ್ದಾರೆ. ಸಿಡಿ ಬಿಡುಗಡೆಯಾಗಿ ವಿವಾದ ಉಂಟಾದ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದೆ. ಆಗ ನನ್ನ ಕುಟುಂಬ ನನ್ನ ಬೆನ್ನಿಗೆ ನಿಂತು ಅನ್ಯಾಯ ಮಾಡಿದವರ ವಿರುದ್ಧ ಹೋರಾಡಲು ಶಕ್ತಿ ತುಂಬಿದ್ದಾರೆ. ಹಾಗಾಗಿ ಹೋರಾಡಲು ಮುಂದಾಗಿದ್ದೇನೆ ಎಂದು ತಿಳಿಸಿದರು.

Facebook Comments

Sri Raghav

Admin