ನನ್ನ ಮೇಲಿನ ಭಾರ ಕಡಿಮೆಯಾಗಿದೆ : ರಮೇಶ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ramesh-kumAR-V

ಕಲಬುರಗಿ, ನ.28- ಕೆಪಿಎಂಇ ವಿಧೇಯಕ ಮಂಡನೆಯಲ್ಲಿ ಮುಖ್ಯಮಂತ್ರಿಯವರು ಪ್ರಮುಖ ಪಾತ್ರ ನಿರ್ವಹಿಸಿದರು. ಅವರು ಇಲ್ಲದಿದ್ದರೆ ವಿಧೇಯಕ ಮಂಡನೆ ಕ್ಲಿಷ್ಟಕರವಾಗುತಿತ್ತು ಎಂದು ಆರೋಗ್ಯ ಸಚಿವ ರಮೇಶ್‍ಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಂಇ ವಿಧೇಯಕ ಮಂಡನೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಲುಬಂಡೆಯಂತೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡರು. ಅವರು ಈ ರೀತಿ ನನಗೆ ಬೆಂಬಲವಾಗಿ ನಿಲ್ಲದಿದ್ದರೆ ವಿಧೇಯಕ ಮಂಡಿಸುವುದು ತುಂಬಾ ಕಷ್ಟವಾಗುತ್ತಿತ್ತು ಎಂದರು. ಇದೀಗ ಕೆಪಿಎಂಇ ವಿಧೇಯಕ ಮಂಡನೆಯಾಗಿರುವುದರಿಂದ ನನ್ನ ಮೇಲಿನ ಭಾರ ಕಡಿಮೆಯಾಗಿದೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಬಹುಮುಖ್ಯಪಾತ್ರ ನಿರ್ವಹಿಸಿದರು ಎಂದು ಶ್ಲಾಘಿಸಿದರು.

Facebook Comments

Sri Raghav

Admin