ನಿಧಿ ಆಸೆಗೆ ಭೂಮಿ ಅಗೆದು ಮೂರ್ತಿ ಬಿಸಾಡಿದ ಹೋದ ಕಿಡಿಗೇಡಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Bijapur--02

ವಿಜಯಪುರ, ನ.28-ನಿಧಿ ಆಸೆಗೆ ಭೂಮಿ ಅಗೆದು ಅಲ್ಲಿದ್ದ ಬಸವಣ್ಣನ ಮೂರ್ತಿಯನ್ನು ಕಿಡಿಗೇಡಿಗಳು ತೆಗೆದು ಬಿಸಾಡಿರುವ ಘಟನೆ ನಗರದ ಗೋಳಗುಮ್ಮಟ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಜನರು ಆತಂಕಗೊಂಡಿದ್ದಾರೆ. ಎಸ್.ವಿ.ಪಾಟೀಲ್ ಎಂಬುವರಿಗೆ ಸೇರಿದ ಜಾಗದಲ್ಲಿ ದುಷ್ಕರ್ಮಿಗಳು ಸುಮಾರು 8 ಅಡಿ ಅಗೆದಿದ್ದಾರೆ. ಭೂಮಿ ಅಗೆಯುವಾಗ ಚಿಕ್ಕದಾದ ಬಸವಣ್ಣನ ಮೂರ್ತಿ ಸಿಕ್ಕಿದ್ದು, ಅದನ್ನು ಅಲ್ಲೇ ಬಿಸಾಡಿ ಹೋಗಿದ್ದಾರೆ. ಬೆಳಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಗೋಳಗುಮ್ಮಟ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಬಸವಣ್ಣನ ಮೂರ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Facebook Comments

Sri Raghav

Admin