ನ್ಯಾಯಾಧೀಶೆಯನ್ನು ಅಪಹರಿಸಲೆತ್ನಿಸಿದ ಕ್ಯಾಬ್ ಚಾಲಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Taxi--01

ನವದೆಹಲಿ, ನ.28-ಮಹಿಳಾ ನ್ಯಾಯಾಧೀಶರೊಬ್ಬರ ಅಪಹರಣಕ್ಕೆ ಯತ್ನಿಸಿದ ಆರೋಪದ ಮೇಲೆ ಕ್ಯಾಬ್ ಚಾಲಕನೊಬ್ಬನನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕ್ಯಾಬ್ ಚಾಲಕನು ನಿನ್ನೆ ಕಾರಿನಲ್ಲಿ ತಮ್ಮನ್ನು ಕರ್‍ಕರ್‍ಡೂಮಾ ಕೋರ್ಟ್‍ಗೆ ಕರೆದ್ಯೊಯುವ ಬದಲು ರಾಷ್ಟ್ರೀಯ ಹೆದ್ದಾರಿ-24ರಲ್ಲಿ ಹಪುರ್‍ನತ್ತ ವಾಹನವನ್ನು ಚಾಲನೆ ಮಾಡಲು ಆರಂಭಿಸಿದ ಎಂದು ನ್ಯಾಯಾಧೀಶರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ನಾನು ಪೊಲೀಸರಿಗೆ ಮತ್ತು ನನ್ನ ಸಹದ್ಯೋಗಿಗೆ ಮಾಹಿತಿ ನೀಡಿದೆ. ಕೆಲ ದೂರ ಕಾರನ್ನು ಚಾಲನೆ ಮಾಡಿದ ನಂತರ ಆತ ದೆಹಲಿಯತ್ತ ಯು-ಟರ್ನ್ ಮಾಡಿದ ನಂತರ ಘಾಜಿಪುರ್ ಟೋಲ್ ಪ್ಲಾಜಾ ಬಳಿ ಆತನನ್ನು ಪೊಲೀಸರು ತಡೆದು ಬಂಧಿಸಿದರು. ಖಾಸಗಿ ಕಂಪನಿಯ ಚಾಲಕನಾದ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments

Sri Raghav

Admin