ಮತ್ತಷ್ಟು ಬಾಯ್ತೆರೆದ ಬಾಲಿ ಜ್ವಾಲಾಮುಖಿ, ಭಾರತೀಯರ ರಕ್ಷಣೆಗೆ ಸುಷ್ಮಾ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Bali--02

ಕರಂಗಸೆಮ್, ನ.28-ಇಂಡೋನೆಷ್ಯಾದ ಬಾಲಿ ದ್ವೀಪದ ಮೌಂಟ್ ಆಗುಂಗ್ ಅಗ್ನಿಪರ್ವತ ಇಂದು ಮತ್ತಷ್ಟು ಬಾಯ್ತೆರೆದಿದ್ದು, ಭಾರೀ ಪ್ರಮಾಣದ ಬೆಂಕಿ ಮಿಶ್ರಿತ ಹೊಗೆ ಉಗುಳಲಾರಂಭಿಸಿದೆ. ದ್ವೀಪದ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಎರಡನೇ ದಿನವಾದ ಇಂದು ಸಹ ಮುಚ್ಚಲಾಗಿದ್ದು, ಸಾವಿರಾರು ಪ್ರವಾಸಿಗರು ಅತಂತ್ರಕ್ಕೆ ಒಳಗಾಗಿದ್ದಾರೆ.  ಜ್ವಾಲಾಮುಖಿ ಸಮೀಪದ ಗ್ರಾಮಗಳಿಂದ ಸಹಸ್ರಾರು ಮಂದಿಯನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ.
ಇದೇ ವೇಳೆ ಆ ಪ್ರದೇಶದಲ್ಲಿರುವ ಭಾರತೀಯರ ರಕ್ಷಣೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಬಾಲಿಯಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗೆ ಸೂಚನೆ ನೀಡಿದ್ದಾರೆ.

ಮೌಂಟ್  ಆಗುಂಗ್ ಅಗ್ನಿಪರ್ವತ ಕಳೆದ ಒಂದು ವಾರದಿಂದ ಮತ್ತೆ ಸಕ್ರಿಯವಾಗಿದ್ದು, ನಿನ್ನೆ 9,800 ಅಡಿಗಳಷ್ಟು ಎತ್ತರಕ್ಕೆ ಬಿಳಿ ಮಿಶ್ರಿತ ಕಪ್ಪು ಹೊಗೆಯನ್ನು ಕಾರಲು ಆರಂಭಿಸಿದೆ. ಜ್ವಾಲಾಮುಖಿ ಪರ್ವತದ ಇಳಿಜಾರುಗಳಿಂದ ಲಹರ್ (ಜ್ವಾಲಮುಖಿ ಗರ್ಭದ ಮಣ್ಣು ಮತ್ತು ನೀರು) ಹರಿಯಲಾರಂಭಿಸಿದ್ದು, ಅದರ ಪ್ರಮಾಣ ಇಂದು ಮತ್ತಷ್ಟು ಹೆಚ್ಚಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಇಂದು ಗರಿಷ್ಠ ಮಟ್ಟದ ಎಚ್ಚರಿಕೆ ನೀಡಿದ್ದು, ಅಪಾಯ ವಲಯವನ್ನು 10 ಕಿ.ಮೀ.ಗಳಿಗೆ ವಿಸ್ತರಿಸಿದೆ. ಅಪಾಯ ವಲಯದಲ್ಲಿ 22ಕ್ಕೂ ಹೆಚ್ಚು ಗ್ರಾಮಗಳ ಸುಮಾರು ಒಂದು ಲಕ್ಷ ಮಂದಿ ಸಿಲುಕಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯ ಮುಂದುವರಿದೆ. ಜÁಲ್ವಾಮುಖಿ ಯಾವುದೇ ಸಂದರ್ಭದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಪರಿಸ್ಥಿತಿ ಎದುರಿಸಲು ರಕ್ಷಣಾ ಕಾರ್ಯಕರ್ತರು ಸಜ್ಜಾಗಿದ್ದಾರೆ.

Facebook Comments

Sri Raghav

Admin