ಮತ್ತೆ ಪಾಕ್ ಯೋಧರ ಉದ್ಧಟತನ, ಅಪ್ರಚೋದಿತ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Firing--Pak-Border--01

ಜಮ್ಮು, ನ.28-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನಾಪಡೆ ಮತ್ತೆ ಉದ್ಧಟತನ ಪ್ರದರ್ಶಿಸಿದೆ. ಕದನ ವಿರಾಮ ಉಲ್ಲಂಘಿಸಿರುವ ಪಾಕ್ ಯೋಧರು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‍ಓಸಿ) ಬಳಿ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.  ಪಾಕಿಸ್ತಾನ ಸೇನಾಪಡೆ ನಿನ್ನೆ ರಾತ್ರಿ ರಜೌರಿ ಜಿಲ್ಲೆಯ ಜಾಂಗರ್ ಪ್ರದೇಶದ ಮೇಲೆ ಗುಂಡಿನ ದಾಳಿ ನಡೆಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯ ಸೇನಾ ನೆಲೆಗಳ ಮೇಲೆ ಕಳೆದ ವಾರ ಯುದ್ಧ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ್ದ ಪಾಕ್ ಯೋಧರು ನಿನ್ನೆ ರಾತ್ರಿ ಮತ್ತೆ ಪುಂಡಾಟ ತೋರಿದಾರೆ.

ನ.15 ಮತ್ತು ನ.17ರ ನಡುವೆ ಜಮ್ಮು ಮತ್ತು ಪೂಂಚ್ ಜಿಲ್ಲೆಗಳಲ್ಲಿ ಸತತ ಮೂರು ದಿನಗಳ ಕಾಲ ಪಾಕ್ ಸೇನಾಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಕೆಲವು ಯೋಧರು ಗಾಯಗೊಂಡಿದ್ದರು. ನ.2ರಂದು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿ ಭಾರತೀಯ ಪಹರೆ ಸೇನಾ ಸಿಬ್ಬಂದಿ ಮೇಲೆ ಪಾಕ್ ರೇಂಜರ್‍ಗಳು ನಡೆಸಿದ ದಾಳಿಯಲ್ಲಿ ಬಿಎಸ್‍ಎಫ್ ಯೋಧರೊಬ್ಬರು ಹುತಾತ್ಮರಾದರು.

Facebook Comments

Sri Raghav

Admin