ಮಹಿಳಾ ನೇತೃತ್ವದ ಉದ್ಯಮ ಪ್ರಗತಿಗೆ ಒತ್ತು ನೀಡಲು ಇವಾಂಕಾ ಟ್ರಂಪ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Ivanka--01

ಹೈದರಾಬಾದ್, ನ.28-ವನಿತೆಯರ ನೇತೃತ್ವದ ಉದ್ಯಮಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರಿ ಹಾಗೂ ಯಶಸ್ವಿ ಮಹಿಳಾ ಉದ್ಯಮಿ ಇವಾಂಕಾ ಟ್ರಂಪ್ ಆಗ್ರಹಿಸಿದ್ದಾರೆ. ಲಿಂಗ ಆಧಾರಿತ ಉದ್ಯಮಶೀಲತೆಯಲ್ಲಿನ ಅಂತರವನ್ನು ಕೊನೆಗಾಣಿಸುವುದರಿಂದ ವಿಶ್ವಾದ್ಯಂತ ಜಾಗತಿಕ ಜಿಡಿಪಿಯಲ್ಲಿ (ಒಟ್ಟು ಸ್ಥಳೀಯ ಉತ್ಪನ್ನ) ಶೇ.2ರಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ.

ಹೈದರಾಬಾದ್‍ನಲ್ಲಿ ಆರಂಭವಾಗಿರುವ 8ನೇ ವಾರ್ಷಿಕ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ಪ್ರಾಸ್ತವಿಕ ಭಾಷಣ ಮಾಡಿದ ಅವರು, ಮಹಿಳಾ ಉದ್ಯಮಿಗಳಿಗೆ ಬಂಡವಾಳ, ಸಂಪರ್ಕ ಜಾಲಗಳು, ಮಾರ್ಗದರ್ಶಕರು ಮತ್ತು ಸಮಾನ ಕಾನೂನುಗಳು ಲಭ್ಯವಾಗಬೇಕು ಎಂದು ಪ್ರತಿಪಾದಿಸಿದರು. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ನಮ್ಮ ಸಮಾಜಕ್ಕೆ, ನಮ್ಮ ಆರ್ಥಿಕತೆಗೆ ಹಾಗೂ ಆಯಾ ದೇಶಗಳಿಗೆ ತುಂಬಾ ಪ್ರಯೋಜನವಾಗುತ್ತದೆ ಎಂದು ಇವಾಂಕಾ ವಿಮರ್ಶಿಸಿದರು.

Facebook Comments

Sri Raghav

Admin