ಮಹಿಳಾ ಪೊಲೀಸ್‍ಗೆ ಠಾಣೆಯಲ್ಲೇ ಸೀಮಂತ..!

ಈ ಸುದ್ದಿಯನ್ನು ಶೇರ್ ಮಾಡಿ

Police--01

ಮೈಸೂರು, ನ.28- ಪೊಲೀಸರೆಂದರೆ ಕಠಿಣ ಹೃದಯಿಗಳು, ಒರಟು ಜನ. ಅವರಿಗೆ ಯಾವುದೇ ಭಾವನೆಗಳಿಲ್ಲ ಎಂದು ಸಾರ್ವಜನಿಕರು ಭಾವಿಸಿರುವಾಗಲೇ ಮೈಸೂರಿನ ಹೆಬ್ಬಾಳ ಠಾಣೆ ಮಹಿಳಾ ಪೊಲೀಸರು ತಮ್ಮ ಸಹೋದ್ಯೋಗಿಯೊಬ್ಬರಿಗೆ ಠಾಣೆಯಲ್ಲೇ ಸೀಮಂತ ಕಾರ್ಯ ನೆರವೇರಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೆಬ್ಬಾಳ ಠಾಣೆಯ ರೂಪಾ ಎಂಬ ಸಿಬ್ಬಂದಿ ವಿವಾಹವಾಗಿ ಈಗ್ಗೆ ಎರಡು ವರ್ಷ. ಪತಿ ಕಾರ್ಖಾನೆಯೊಂದರ ಉದ್ಯೋಗಿ. ಈಗ ರೂಪಾ 7 ತಿಂಗಳ ಗರ್ಭಿಣಿ. ಇಂದು ಠಾಣೆಯ ಎಲ್ಲ ಮಹಿಳಾ ಸಿಬ್ಬಂದಿ ಸೇರಿ ರೂಪಾಗೆ ಅರಿಶಿನ-ಕುಂಕುಮ, ಹೂ, ಸೀರೆ, ರವಿಕೆ, ಬಳೆ, ಫಲ-ಪುಷ್ಪಗಳನ್ನು ನೀಡಿ ಮಡಿಲು ತುಂಬಿಸಿ ಸೀಮಂತ ಕಾರ್ಯ ನೆರವೇರಿಸಿದರು.

ನಂತರ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಗರ್ಭಿಣಿ ರೂಪಾ ಎಲ್ಲರೂ ಪೊಲೀಸರಿಗೆ ಹೃದಯವಿಲ್ಲ ಎಂದೇ ಹೇಳುತ್ತಾರೆ. ಆದರೆ, ನಮ್ಮ ಸಹೋದ್ಯೋಗಿಗಳು ಈ ರೀತಿ ನಡೆದುಕೊಂಡಿರುವುದು ನನಗೆ ತುಂಬಾ ಖುಷಿ ತಂದಿದೆ. ನಾನು ಎಲ್ಲೇ ಇರಲಿ, ಯಾವತ್ತೇ ಆಗಲಿ ಇದನ್ನು ಮರೆಯಲಾರೆ ಎಂದು ಕೃತಜ್ಞತೆ ಸಲ್ಲಿಸಿದರು.

Facebook Comments