ಮೂವರು ಪಾಕ್ ಪ್ರಜೆಗಳಿಗೆ ಮೆಡಿಕಲ್ ವೀಸಾ : ಸುಷ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

Sushma--Swaraj--02

ನವದೆಹಲಿ, ನ.28-ಭಾರತದಲ್ಲಿ ಚಿಕಿತ್ಸೆಗಾಗಿ ಒಂಭತ್ತು ವರ್ಷದ ಬಾಲಕಿ ಸೇರಿದಂತೆ ಪಾಕಿಸ್ತಾನದ ಮೂವರು ಪ್ರಜೆಗಳಿಗೆ ಮೆಡಿಕಲ್ ವೀಸಾಗಳನ್ನು ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಥಲಸ್ಸೆಮಿಯಾ (ಹಿಮೊಗ್ಲೊಬಿನ್‍ನ ಅಸಾಧಾರಣ ಸ್ವರೂಪದ ರಕ್ತ ನ್ಯೂನತೆ) ರೋಗದಿಂದ ನರಳುತ್ತಿರುವ ತನ್ನ ಒಂಭತ್ತು ವರ್ಷದ ಪುತ್ರಿ ಮಾರಿಯಾಗೆ ಭಾರತದಲ್ಲಿ ಚಿಕಿತ್ಸೆ ನೀಡಲು ಪಾಕ್ ಪ್ರಜೆ ಡ್ಯಾನಿನ್ ಮೆಮೋನ್ ಎಂಬುವರು ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಸಚಿವರು ತಕ್ಷಣ ಪ್ರವಾಸ ದಾಖಲೆಪತ್ರಗಳನ್ನು ನೀಡುವಂತೆ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈ ಕಮೀಷನ್‍ಗೆ ಸೂಚನೆ ನೀಡಿದ್ದಾರೆ. ಅದೇ ರೀತಿ ಮಾರಿಯಮ್ ಆಸಿಮ್ ಎಂಬಾಕೆ ತಂದೆ ಹಾಗೂ ಫರಿಹಾ ಉಸ್ಮಾನ್ ಎಂಬ ಮಹಿಳೆಗೂ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ವೀಸಾಗಳನ್ನು ನೀಡುವಂತೆ ತಾವು ಸೂಚಿಸಿರುವುದಾಗಿ ಸುಷ್ಮಾ ಟ್ವೀಟರ್‍ನಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin